Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ಹೆಜಮಾಡಿ ಶ್ರೀ ಮಹಾಲಿಂಗೇಶ್ವರಕ್ಕೆ 60 ಅಡಿ ಉದದ್ದ ಧ್ವಜಸ್ತಂಭ

ಪಡುಬಿದ್ರಿ: ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಗೊಳ್ಳುತ್ತಿದ್ದು, ಹೆಜಮಾಡಿ ಬಸ್‌ನಿಲ್ದಾಣ ಬಳಿಯ ಪುರಾತನ ಅಶ್ವತ್ಥಕಟ್ಟೆಯಿಂದ ಭಾನುವಾರ ಮೆರವಣಿಗೆಯಲ್ಲಿ ತಂದ ನೂತನ ಧ್ವಜಸ್ತಂಭವನ್ನು ಸ್ವಾಗತಿಸಿ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಆಶೀರ್ವಚಿಸಿದರು.

ದೇವಸ್ಥಾನದ ಜೀರ್ಣೋದ್ಧಾರ ಇಡೀ ಊರಿನ ಭಕ್ತರ ಜೀವನ ಜೀರ್ಣೋದ್ಧಾರ ಆದಂತೆ. ಈ ಕಾರ್ಯದಲ್ಲಿ ಪಾಲ್ಗೊಳ್ಳುವುದು ಭಕ್ತರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪುತ್ತಿಗೆ ಶ್ರೀ ಗಳು ಹೇಳಿದರು. 

ಈ ಕೊಡಿಮರವು ಸುಳ್ಯದಿಂದ ಆಗಮಿಸಿದ್ದು, 60 ಅಡಿ ಉದ್ದವಿದೆ. ಕೊಡಿಮರವನ್ನು ಮೂಲ್ಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ವಾಹನ ಮೆರವಣಿಗೆಯಲ್ಲಿ ತಂದು ಹೆಜಮಾಡಿ ಪುರಾತನ ಅಶ್ವತ್ಥಕಟ್ಟೆ ಬಳಿಯಿಂದ ವೈಭವಯುತ ಶೋಭಾಯಾತ್ರೆ ಮೂಲಕ ದೇವಳಕ್ಕೆ ತರಲಾಯಿತು. ಧ್ವಜಸ್ತಂಭ ನಿರ್ಮಾಣ ಕೊಡುಗೆಯನ್ನು ಹೆಜಮಾಡಿ ಗರಡಿಮನೆ ದಿ.ಕುಮುದಾ ಎಸ್.ಶೆಟ್ಟಿ ಸ್ಮರಣಾರ್ಥ ಅವರ ಪತಿ ಸದಾಶಿವ ಶೆಟ್ಟಿ ನೀಡಿದ್ದಾರೆ.ಸಂಪ್ರದಾಯದಂತೆ ದೇವಳದ ತಂತ್ರಿ ರಾಧಾಕೃಷ್ಣ ತಂತ್ರಿ ಎಡಪದವು, ಅರ್ಚಕರಾದ ರಾಮಚಂದ್ರ ಭಟ್, ಪದ್ಮನಾಭ ಭಟ್, ಶ್ರೀನಿವಾಸ ಆಚಾರ್ಯ, ಪದ್ಮನಾಭ ಆಚಾರ್ಯ ಧ್ವಜಸ್ತಂಭ ಸ್ವಾಗತದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ಬಳಿಕ ಸುತ್ತು ಪೌಳಿ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರು ಕರಸೇವೆ ನಡೆಸಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ್ ಶೆಟ್ಟಿ ಪುಣೆ, ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಮಾಜಿ ಸಚಿವವಿನಯಕುಮಾರ್ ಸೊರಕೆ, ಜಿ.ಪಂ. ಸದಸ್ಯರಾದ ಶಶಿಕಾಂತ ಪಡುಬಿದ್ರಿ, ಗೀತಾಂಜಲಿ ಎಂ.ಸುವರ್ಣ, ತಾಪಂ ಸದಸ್ಯರಾದ ರೇಣುಕಾ ಪುತ್ರನ್, ನೀತಾ ಗುರುರಾಜ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಪ್ರಭಾಕರ ಪೂಜಾರಿ ಕಾಪು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ದೇವಳದ ಮೊಕ್ತೇಸರರಾದ ಶಂಕರ ಶೆಟ್ಟಿ, ರವೀಂದ್ರ ಕೋಟ್ಯಾನ್, ಜಯಂತ್ ಪುತ್ರನ್, ಗಣೇಶ್ ಸಿ.ಆಚಾರ್ಯ. 

ಸುರೇಶ್ ದೇವಾಡಿಗ, ಪಾಂಡುರಂಗ ಕರ್ಕೇರ, ಸಂಜೀವ ಟಿ., ಜಯಂತಿ ಅಚಾರ್ಯ, ಇಂದಿರೇಶ್ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಘುಪತಿ ರಾವ್, ಉಪಾಧ್ಯಕ್ಷರಾದ ಅರುಣ್ ಶೆಟ್ಟಿ ಪಡುಮನೆ, ಜಿನರಾಜ ಬಂಗೇರ, ಸುಧಾಕರ ಕರ್ಕೇರ, ಲೋಕೇಶ್ ಅಮೀನ್, ಹರೀಶ್ ದೇವಾಡಿಗ, ರಾಜೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ದಿವಾಕರ ಹೆಜಮಾಡಿ, ಕೋಶಾಧಿಕಾರಿ ಎಚ್.ಆರ್. ರಮೇಶ್ ಭಟ್, ಮುಂಬೈ ಸಮಿತಿ ಅಧ್ಯಕ್ಷ ಪುಷ್ಪರಾಜ್ ಎಸ್.ಶೆಟ್ಟಿ, ಹೆಜಮಾಡಿ ಏಳೂರು ಮೊಗವೀರ ಸಭಾ ಅಧ್ಯಕ್ಷ ಸದಾಶಿವ ಕೋಟ್ಯಾನ್, ನಾರಾಯಣ ಮೆಂಡನ್, ದಾಮೋದರ ಬಂಗೇರ ಹಾಗೂ ವಿವಿಧ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!