ದಸರಾ, ದೀಪಾವಳಿ ಹಬ್ಬ ಆಚರಣೆಗೆ ಅನುಮತಿ,ಮಾರ್ಗಸೂಚಿಯಂತೆ ಆಚರಿಸಿ~ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್  

ಕರ್ನಾಟಕದಲ್ಲೆಡೆ ಅ. 17 ರ ಶನಿವಾರದಿಂದ ಅ.26 ರ ಮಂಗಳವಾರದವರೆಗೆ ಒಟ್ಟು 9 ದಿನಗಳ ಕಾಲ ದಸರಾದ ಹಬ್ಬವಾದರೆ, ನ. 14 ರಿಂದ ನ. 17 ರವರೆಗೆ ದೀಪಾವಳಿಯ ಸಂಭ್ರಮ.

ಸದ್ಯ ಕೊರೋನಾದ ಸಂದರ್ಭವಾದ ಕಾರಣ ಸರಳ ಹಾಗೂ ಶ್ರದ್ಧೆಯಿಂದ ದಸರಾ ಹಾಗೂ ದೀಪಾವಳಿ ಹಬ್ಬಗಳನ್ನು ಆಚರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ದಸರಾ ಹಬ್ಬ ಆಚರಣೆಗೆ ಅನುಮತಿ ನೀಡಿದ್ದು, ಅದರೊಂದಿಗೆ ಕಡ್ಡಾಯವಾಗಿ ಪಾಲಿಸಬೇಕಾದ ಕೊರೋನಾ ನಿಯಂತ್ರಣ ಕ್ರಮಗಳನ್ನೊಳಗೊಂಡ ಮಾರ್ಗಸೂಚಿಯನ್ನು ಬಿಡುಗಡೆ ಗೊಳಿಸಿದೆ.
.

ಪಾಲಿಸಬೇಕಾದ ಮಾರ್ಗಸೂಚಿ ನಿಯಮಗಳು: • ಜನತೆ ದಸರಾ ಆಚರಣೆಯಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯ ವಾಗಿ ಪಾಲಿಸಬೇಕು. • ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ದಸರಾ ಹಬ್ಬ ಆಚರಿಸಬೇಕು. • ದಸರಾವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಮೈಸೂರು ಹೊರತಾಗಿ ರಾಜ್ಯದ ಇತರೆಡೆ ದಸರಾ ಆಚರಣೆಯ ಕಾರ್ಯಕ್ರಮಗಳಲ್ಲಿ 10ಕ್ಕಿಂತ ಹೆಚ್ಚು ಜನರು ಒಂದೇ ಬಾರಿಗೆ ಸೇರುವಂತಿಲ್ಲ.

ಇನ್ನು ದೀಪಾವಳಿ ಹಬ್ಬಕ್ಕೂ ಮಾರ್ಗಸೂಚಿ ನೀಡಲಾಗಿದೆ. ಮೂರು ದಿನಗಳ ಕಾಲ ಅಂದರೆ, ನ. 14 ನರಕ ಚತುರ್ದಶಿ, ನ.15ರಂದು ದೀಪಾವಳಿ ಮತ್ತು ನ.16ರಂದು ಬಲಿಪಾಡ್ಯಮಿ ಆಚರಿಸಲಾಗುತ್ತದೆ.• ಪಟಾಕಿಯನ್ನು ಸಂಬಂಧ ಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತವಾಗಿ ಪರವಾನಗಿಯನ್ನು ಪಡೆದು, ಮಾರಾಟ ಮಾಡಬೇಕು.ಪಟಾಕಿ ಮಾರಾಟಕ್ಕೆ ನ . 01ರಿಂದ 17 0ರವರೆಗೆ ಮಾತ್ರ ಅಂಗಡಿಗಳನ್ನು ತೆರೆದಿರಬೇಕು.

• ಸಾರ್ವಜನಿಕ ವಸತಿ ಸ್ಥಳಗಳಿಂದ ದೂರದ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿಯೆ ಪಟಾಕಿ ಮಳಿಗೆಗಳನ್ನು ತೆರೆ ಯಲು ಅನುಮತಿ ನೀಡಲಾಗುವುದು. * ಪರವಾನಿಗೆ ಪಡೆದ ಮಾರಾಟಗಾರರು ಇಲಾಖೆ, ಪ್ರಾಧಿಕಾರದಿಂದ ಸೂಚಿಸಿ ದಂತ ಸ್ಥಳದಲ್ಲಿಯೇ ತಾತ್ಕಾಲಿಕ ಮಳಿಗೆಗಳನ್ನು ತೆರೆಯಬೇಕು. • ಒಂದು ಪಟಾಕಿ ಅಂಗಡಿಯಿಂದ ಮತ್ತೊಂದು ಮಳಿಗೆಗೆ 6 ಮೀಟರ್ ಅಂತರವಿದ್ದು, ಪ್ರತಿದಿನ ಅಂಗಡಿಯ ಸುತ್ತಾ ಮುತ್ತ ಸ್ಯಾನಿಟೈಸೇಷನ್ ಕಡ್ಡಾಯ.

• ಪಟಾಕಿ ಖರೀದಿಸುವವರು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಈ ಮಾರ್ಗಸೂಚಿಗಳ್ನು ಮಹಾನಗರ ಪಾಲಿಕೆಗಳ ಆಯುಕ್ತರು, ಪೊಲೀಸ್ ಆಯುಕ್ತರು, ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಇತರೆ ಇಲಾಖಾ ಮುಖ್ಯಸ್ಥರುಗಳು, ಇಲಾಖಾ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಸೂಚಿಸಲಾಗಿದೆ.

 
 
 
 
 
 
 
 
 
 
 

Leave a Reply