ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ರುದ್ರಾಯಾಗ  

ಉಡುಪಿ ಬನ್ನಂಜೆ ಮಹಾಲಿಂಗೇಶ್ವರ ದೇವಾಲದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಸೋಮವಾರ ಮಹಾ ರುದ್ರಾಯಾಗದ ಧಾರ್ಮಿಕ ಪೂಜಾ ವಿಧಾನಗಳನ್ನು ಶ್ರೀನಿವಾಸ ತಂತ್ರಿಯವರ  ಮಾರ್ಗದರ್ಶನದಲ್ಲಿ ಗುಂಡಿಬೈಲ್ ಸುಬ್ರಮಣ್ಯ ಅವಧಾನಿ ನೇತ್ರತತ್ವದಲ್ಲಿ  ಅರ್ಚಕ ವೃಂದ ನೆಡೆಸಿಕೊಟ್ಟರು.  ದೇವಳದ ಅರ್ಚಕ ವಾಸುದೇವ ಉಪಾದ್ಯಾಯ ದೇವರಿಗೆ ಶತ ರುದ್ರಾಭಿಷೇಕ  ಮತು  ನವಕ ಪ್ರಧಾನ ಕಲಶ ಸೇವ ನೆಡೆಸಿದರು. 
 
ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು. ಮಹಿಳಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ನೆಡೆಯಿತು, ದೇವಳದ ಅಧ್ಯಕ್ಷ ಮಾಧವ ಬನ್ನಂಜೆ ಮಾಜಿ ಸಚಿವ ಪ್ರಮೋದ ಮಧ್ವರಾಜ್, ಯಶಪಾಲ್ ಸುವರ್ಣ, ದಿನೇಶ ಪುತ್ರನ್, ಯು ಸುದೇಶ್ ಶೇಟ್, ನಿತ್ಯಾನಂದ, ಅರುಂಧತಿ ಶೆಟ್ಟಿ, ಸತೀಶ ಭಂಡಾರಿ, ಟಿ ಜಿ ಹೆಗಡೆ, ಪೊರೊಷೋತ್ತಮ ಶೆಟ್ಟಿ, ಪ್ರಭಾಕರ ಶೆಟ್ಟಿ,  ವಿಧ್ಯಾಲತಾ ಶೆಟ್ಟಿ  ಉಪಸ್ಥಿತರಿದ್ದರು. ರುದ್ರಯಾಗದ ಪೂರ್ಣಾಹುತಿ ಹಾಗು ದೇವರಿಗೆ ಮಹಾ ಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆಡೆಯಿತು.
 
 
 
 
 
 
 
 
 
 
 

Leave a Reply