25 C
Udupi
Tuesday, October 20, 2020

7 ತಿಂಗಳ ಬಳಿಕ ಶಬರಿಮಲೆಗೆ ಭಕ್ತರ ಪ್ರವೇಶ

ತಿರುವನಂತಪುರಂ: ಮಾಹಮಾರಿ ಕೊರೋನಾದ ಹಿನ್ನಲೆ ಮಾರ್ಚ್ ತಿಂಗಳಿಂದ ಭಕ್ತರು ಪ್ರವೇಶಕ್ಕೆ ಅನುಮತಿಸದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಇಂದು ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿದೆ.

ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಕಳೆದ 7 ತಿಂಗಳಿನಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಇಂದಿನಿಂದ ಪ್ರತಿನಿತ್ಯ 250 ಮಂದಿಗೆ ಪ್ರವೇಶಿಸಲು ಅನುಮತಿ ನೀಡಿದೆ. ಭಕ್ತರು ಆನ್ ಲೈನ್ ನಲ್ಲಿ ನೊಂದಾಯಿಸಿ ಕೊಂಡು ದೇವಸ್ಥಾನಕ್ಕೆ ಆಗಮಿಸುವುದು ಕಡ್ಡಾಯವಾಗಿದೆ.

ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ದೇವಳ ಪ್ರವೇಶಿಸುವ ಮುನ್ನ 48 ಗಂಟೆಗಳ ಹಿಂದಿನ ಕೊರೋನಾ ನೆಗಟಿವ್ ವರದಿ ಪ್ರಮಾಣಪತ್ರವನ್ನು ಹೊಂದಿರಬೇಕು. ಹಾಗೆಯೇ 10 ರಿಂದ 60 ವರ್ಷದೊಳಗಿನವರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ನವರಾತ್ರಿ-೪ ~ ಎಲ್ಲೂರಿನ ‘ಅಮ್ನೂರು’~ಕೆ.ಎಲ್.ಕುಂಡಂತಾಯ

ಪಾರಂಪರಿಕ ಸಂಪ್ರದಾಯ, ಶಿಷ್ಟಾಚಾರ, ಒಡಂಬಡಿಕೆ, ಒಪ್ಪಿಗೆಗಳೊಂದಿಗೆ ಕರಾವಳಿಯಲ್ಲಿ ಅಭಿವೃದ್ಧಿಗೊಂಡ ದೇವಾಲಯ ಸಂಸ್ಕೃತಿಯ ಮಾದರಿಯಾಗಿ ಪ್ರಸಿದ್ಧಿಯನ್ನು ಪಡೆದ ದೇವಾಲಯಗಳಲ್ಲಿ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವ ಸ್ಥಾನ ಒಂದು. ಇಲ್ಲಿಯ ಉಪಸ್ಥಾನ ಸನ್ನಿಧಿಯಾಗಿ "ಅಮ್ನೂರು"...

ಇಂಜಿನಿಯರಿಂಗ್ ಗೆ ಆಸರೆಯಾದ ಹೈನುಗಾರಿಕೆ.

ಗಂಡು ದಿಕ್ಕಿಲ್ಲದ ಕುಟುಂಬವೊಂದಕ್ಕೆ ಹೈನುಗಾರಿಕೆ ಆಸರೆಯಾಗಿ, ಹೆಣ್ಣು ಮಕ್ಕಳ ಭವಿಷ್ಯ ಒಂದು ಹಂತ ತಲುಪಲು ಸಹಕಾರಿಯಾಗಿದೆ. ನೀರೆ ಬೈಲೂರಿನ  ಸುಜಾತ ಪ್ರಭು ಮತ್ತು ದಿವಂಗತ ಸುಬ್ರಾಯ ಪ್ರಭು ದಂಪತಿಗೆ ನಾಲ್ವರು ಹೆಣ್ಣುಮಕ್ಕಳು. ಕ್ಯಾನ್ಸರ್...

ಮುಗಿಯದು ಮುಂದಿನ ದಾರಿ~Click:Ashok Donderangadi

ಮುಗಿಯದು ಮುಂದಿನ ದಾರಿ ಸಾಗಿದಷ್ಟೂ ಇದೆ ಬಯಲು..! ಸಾಗಬೇಕು ಸಂತಸದಿ ಸದಾ ಮೊಗಾರವಿಂದ ಅರಳಿದಂತೆ..! ಸಾಗುವುದು ಬದುಕ ಪಥ ಹೀಗೆಯೇ ಎಂದಿನಂತೆ...!! ಎತ್ತಿನ ಗಾಡಿಯನೇರಿ ಸಾಗುವಾಗ ಕೇಳಿಸುವ ಗಾಲಿಯ ಶಬ್ದ, ಗೊರಸುಗಳು ನೆಲಕ್ಕೆ ಬಲವಾಗಿ ಊರಿದಾಗ ಬರುವ ಗತ್ತಿನ ಸದ್ದು,ಗಾಡಿಗೆ ಕಟ್ಟಿದ...

ಉಡುಪಿಯಲ್ಲಿ 50ಕ್ಕೂ ಅಧಿಕ ದಲಿತರು ಬೌದ್ಧ ಧರ್ಮಕ್ಕೆ ಮತಾಂತರ

ಉಡುಪಿ: ಭಾನುವಾರದಂದು ಉಡುಪಿ ಜಿಲ್ಲಾ ಬೌದ್ಧ ಮಹಾಸಭಾ ವತಿಯಿಂದ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್‌ರವರ 64ನೇ ದಮ್ಮ ಚಕ್ರ ಪ್ರವರ್ತನಾ ದಿನಾಚರಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಜಿಲ್ಲೆಯ ಸುಮಾರು 50ಕ್ಕೂ ಅಧಿಕ ದಲಿತರು...

ಹೆಲ್ಮಟ್ ಹಾಕದೆ ವಾಹನ ಚಾಲನೆ, ಮೂರೂ ತಿಂಗಳ ಪರವಾನಿಗೆ ರದ್ದು

ಬೆಂಗಳೂರು: ಇನ್ನು ಮುಂದೆ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಕೇವಲ ದಂಡ ಮಾತ್ರವಲ್ಲ ಬದಲಾಗಿ ಮೂರು ತಿಂಗಳು ಚಾಲಕನ ಪರವಾನಗಿ ಅಮಾನತು ಮಾಡಲು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇದೀಗ ರಾಜ್ಯ ಸರ್ಕಾರ ಈ...
error: Content is protected !!