Janardhan Kodavoor/ Team KaravaliXpress
32.6 C
Udupi
Sunday, February 5, 2023
Sathyanatha Stores Brahmavara

ಪರ್ಯಾಯ ಶ್ರೀ ಅದಮಾರು ಮಠದ ಸಾಮಾಜಿಕ ಕಳಕಳಿ 

ಸೆ.21: ನಿನ್ನೆ ಸಂಭವಿಸಿದ ಭಾರೀ ಮಳೆಯಿಂದಾಗಿ ಶ್ರೀಕೃಷ್ಣ ಮಠದ ಸುತ್ತಲಿನ ನೆರೆಪ್ರದೇಶಗಳಾದ ಕಲ್ಸಂಕ, ಪಾರ್ಕಿಂಗ್ ಏರಿಯಾ ಮತ್ತು ಬೈಲಕೆರೆಗಳಲ್ಲಿ ಪರ್ಯಾಯ ಶ್ರೀ ಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ಶ್ರೀಮಠದ ವ್ಯವಸ್ಥಾಪಕ ಶ್ರೀ ಗೋವಿಂದ ರಾಜ್ ಮತ್ತು ಸ್ಥಳೀಯ ಉದ್ಯಮಿ ಶ್ರೀ ಹರೀಶ್ ಬೈಲಕೆರೆಯವರೊಂದಿಗೆ ಮನೆ-ಮನೆಗೆ ತೆರಳಿ, ಅವರ ಯೋಗಕ್ಷೇಮ ವಿಚಾರಿಸಿ, ಬೆಳಗ್ಗಿನ ಫಲಾಹಾರದ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. 
ಮಧ್ಯಾಹ್ನ 11.00 ಗಂಟೆಗೆ ಎಲ್ಲಾ ಮನೆಗಳಿಗೆ  ಜ್ವರ ನಿರೋಧಕ ಕಷಾಯವನ್ನು ವಿತರಿಸಲಾಗುವುದು. ಹಾಗೆಯೇ ಮಧ್ಯಾಹ್ನದ ಭೋಜನ ವನ್ನು ಮನೆ-ಮನೆಗೆ ತಲುಪಿಸುವಂತಹ ವ್ಯವಸ್ಥೆಯನ್ನು ಮಾಡಲಿದೆ. ಅವರು ಅಪೇಕ್ಷಿಸಿದರೆ ಸಾಯಂಕಾಲದ ಭೋಜನವನ್ನು ಶ್ರೀಮಠದಿಂದ ನೀಡಲಾಗುವುದು. ಸ್ಥಳಿಯರು ಕೂಡ ಸುರಕ್ಷಿತರಾಗಿರ ಬೇಕೆನ್ನುವ ಶ್ರೀಪಾದರ ಆಶಯದಂತೆ ಈ ಎಲ್ಲಾ ಕಾರ್ಯಕ್ರಮಗಳನ್ನು ಶ್ರೀಮಠವು ಮಾಡುತ್ತಿದೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!