ಕಂಗಣಬೆಟ್ಟು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನ, ಶ್ರೀಬ್ರಹ್ಮ ಮತ್ತು ಶ್ರೀವೀರಭದ್ರ ಹಾಗೂ ಸಿರಿ ಅಬ್ಬಗ-ದಾರಗ ದೈವಸ್ಥಾನದ ಜೀರ್ಣೋದ್ದಾರ

ಕೊಡವೂರು ಕಂಗಣಬೆಟ್ಟು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ, ಶ್ರೀಬ್ರಹ್ಮ ಮತ್ತು ಶ್ರೀವೀರಭದ್ರ ಹಾಗೂ ಸಿರಿ ಅಬ್ಬಗ-ದಾರಗ ದೈವಸ್ಥಾನದ ಕೆಲಸವು ಈಗಾಗಲೇ ಶೇಕಡಾ ಎಂಬತ್ತರಷ್ಟು ಮುಗಿದಿದ್ದು, ಇನ್ನುಳಿದ ಕೆಲಸವು ಭರದಿಂದ ಸಾಗುತ್ತಿದೆ.


ಇದುವರೆಗೆ ನಡೆದಿರುವ ಕೆಲಸದಲ್ಲಿ ಕರ ಸೇವಕರದ್ದೇ ಸಿಂಹಪಾಲು. ಕೇವಲ ದೇವಳದ ಕೆಲಸ ಮಾತ್ರವಲ್ಲದೆ, ಫೆಬ್ರವರಿಯಲ್ಲಿ ನಡೆಯುವ ಹೊರೆಕಾಣಿಕೆಯಿಂದ ಹಿಡಿದು ಬ್ರಹ್ಮಕಲಶದವರೆಗಿನ ಪರ್ಯಂತ ನಡೆಯುವ ಅನ್ನಸಂತರ್ಪಣೆಗೆ ಬೇಕಾದ ಹಸಿರುವಾಣಿಯಲ್ಲಿ ನಮ್ಮದೂ ಒಂದು ಪಾಲು ಇರಬೇಕು ಎನ್ನುವ ನಿಟ್ಟಿನಲ್ಲಿ ಕರಸೇವಕರೇ ಒಟ್ಟಾಗಿ ಸೇರಿ, ಸಿರಿ- ಕುಮಾರನ ಕಂಬಳ ನಡೆಯುವ ಗದ್ದೆಯಲ್ಲಿ

ಕುಂಬಳಕಾಯಿ, ಸೌತೆ, ಸಿಹಿಕುಂಬಳಕಾಯಿ, ಬದನೆ, ಮೆಣಸಿನಕಾಯಿ, ಕಲ್ಲಂಗಡಿ, ಮುಂತಾದ ಬೆಳೆಗಳನ್ನು ಬೆಳೆಸುವ ಸಂಕಲ್ಪ ದೊಂದಿಗೆ, ಬಿತ್ತನೆಯ ಕಾರ್ಯವನ್ನು

ಸೋಮವಾರ ದಂದು, ಕೊಡವೂರಿನ ಹಿರಿಯ ಮುತ್ಸದ್ದಿ ಗಳಾದ ಕಾಳುಶೇರಿಗಾರ್, ಕೆ.ಟಿ. ಪೂಜಾರಿ, ನಗರಸಭಾ ಸದಸ್ಯರಾದ ವಿಜಯ್ ಕೊಡವೂರು.

ರಾಜುಶೆಟ್ಟಿ ಜನ್ನಿಬೆಟ್ಟು, ಜಗನ್ನಾಥ್ ಶೆಟ್ಟಿ ದೊಡ್ಡಮನೆ, ಜಗದೀಶ್ ಶೆಟ್ಟಿ ಕಂಬಳ ಮನೆ, ಸಂತೋಷ್ ಶೆಟ್ಟಿ ಬೈಲುಮನೆ, ಅಪ್ಪು ಬೆಲ್ಚಡ, ಹಾಗೂ ದೈವಸ್ಥಾನದ ಕಮಿಟಿಯ ಅಧ್ಯಕ್ಷರು ಮತ್ತು ಪದಾಧಿಕಾರಿ ಗಳು ಹಾಗೂ ಸರ್ವ ಸದಸ್ಯರು, ಮತ್ತು ಗೌರವದ ಕರೆಯವರು, ಅಂತೆಯೇ ಜೀರ್ಣೋದ್ಧಾರದ ಕರಸೇವಕರು ಈ ಸಮಯದಲ್ಲಿ ಉಪಸ್ಥಿತ ರಿದ್ದರು.

 
 
 
 
 
 
 
 
 
 
 

Leave a Reply