ಕಟೀಲು ದೇವಳದ 17 ಸಿಬ್ಬಂದಿಗಳಿಗೆ ಕೊರೋನಾ ಸೊಂಕು

ಮೂಲ್ಕಿ: ಬಹು ಪ್ರಸಿದ್ಧ ದೇವಿಕ್ಷೇತ್ರವಾಗಿರುವ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಾಲಯದ 17 ಸಿಬ್ಬಂದಿಗಳಲ್ಲಿ ಇದೀಗ ಕೋವಿಡ್-19 ಸೊಂಕು ಪತ್ತೆಯಾಗಿದೆ.

ಕೊರೋನಾ ಹೆಚ್ಚಾಗಿದ್ದ ಕಾರಣ ಕೆಲವು ತಿಂಗಳುಗಳ ಕಾಲ ದೇಗುಲಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಹಲವು ದಿನಗಳ ಹಿಂದೆಯಷ್ಟೇ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿ ಅದರೊಂದಿಗೆ ಭಕ್ತರಿಗೆ ಭೋಜನದ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು.

ಸರ್ಕಾರದ ಆದೇಶಾನುಸಾರ ಕೊರೊನಾ ದ ಎಲ್ಲಾ ನಿಯಮಗಳನ್ನು ದೇಗುಲದಲ್ಲಿ ಪಾಲಿಸಲಾಗಿತ್ತು. ಮತ್ತು ಭಕ್ತರ ನಡುವೆ ಅಂತರ, ಮಾಸ್ಕ್ ಧರಿಸುವುದು ಮೊದಲಾದ ಷರತ್ತುಗಳನ್ನು ಇಲ್ಲಿ ಕಡ್ಡಾಯಗೊಳಿಸಲಾಗಿತ್ತು .

Leave a Reply