ಗೋಲ್ಕೊಂಡ ಕೋಟೆ: ಕ್ಲಿಕ್ ~ಸುಶಾಂತ್ ಭಟ್ ಕೆರೆಮಠ

ಗೋಲ್ಕೊಂಡ ಕೋಟೆಯು ತೆಲಂಗಾಣ ರಾಜ್ಯದ ಹೈದ್ರಾಬಾದ್‌ನಲ್ಲಿರುವ ಕುತುಬ್‌ ಶಾಹಿ ರಾಜವಂಶದವರು ನಿರ್ಮಿಸಿದ ಭದ್ರವಾದ ಕೋಟೆಯಾಗಿದೆ.

ಗೋಲ್ಕೊಂಡ ಕೋಟೆಯು ದಕ್ಷಿಣ ಭಾರತದ ಸುಪ್ರಸಿದ್ಧವಾದ ಮತ್ತು ಬೃಹತ್ತಾದ ಕೋಟೆಗಳಲ್ಲಿ ಒಂದಾಗಿದೆ. ಇದು ಸುಮಾರು 400 ಅಡಿ ಎತ್ತರದ ಗ್ರಾನೈಟ್‌ ಗುಡ್ಡದ ಮೇಲೆ ನಿರ್ಮಿಸಲಾಗಿದೆ. ಅಲ್ಲದೆ, ಸುಮಾರು 7 ಕಿ.ಮೀ ಸುತ್ತಳತೆಯುಳ್ಳ ಮೂರು ಸುತ್ತಿನ ಭದ್ರವಾದ ಕೋಟೆ ಇದಾಗಿದೆ. ಕೋಟೆಯು 8 ದ್ವಾರಗಳನ್ನು ಹೊಂದಿದ್ದು, 87 ಕೊತ್ತಳಗಳನ್ನು ಒಳಗೊಂಡಿದೆ. ಈ ಕೋಟೆಯ ಗೋಡೆಯ ಸುತ್ತಲೂ ಕಂದಕವಿದೆ.

ಗುಡ್ಡದ ಮಧ್ಯಭಾಗದಲ್ಲಿ ಕೆರೆಗಳು, ಮದ್ದಿನ ಮನೆಗಳು, ರಾಜಗೃಹಗಳು, ಸಭಾಮಂದಿರ, ಲಾಯ, ಮಸೀದಿ, ಉದ್ಯಾನವನ ಹಾಗು ಉಗ್ರಾಣಗಳಿವೆ. ಕೋಟೆಯ ಕೆಳ ಹಂತದಲ್ಲಿ ರಾಣಿ ನಿವಾಸಗಳು ಸೇವಕರ ವಾಸಗೃಹಗಳು ಇವೆ. ಕೋಟೆಗೆ ಸ್ವಲ್ಪ ದೂರದಲ್ಲಿ ಕುತುಬ್ ಶಾಹಿ ದೊರೆಗಳ ಗೋರಿಗಳಿವೆ.

ಕೋಟೆಯ ಒಂದೊಂದು ದ್ವಾರಗಳಿಗೆ ಒಂದೊಂದು ಹೆಸರನ್ನು ಇಲ್ಲಿನ ಕುತುಬ್ ಶಾಹಿ ದೊರೆಗಳು ನೀಡಿದ್ದಾರೆ. ಅವುಗಳನ್ನು ಫತೇಹ್‌, ಬಹಮನಿ, ಮೆಕ್ಕ, ಪಟನ್ಚೆರು, ಬಂಜಾರು, ಜಮಾಲಿ, ನಯಾಕಿಲಾ ಮತ್ತು ಮೋತಿ.

ಗೋಲ್ಕೊಂಡಾ ಕೋಟೆಗೆ ಈ ಹೆಸರು ಬರಲು ರೋಚಕವಾದ ಒಂದು ದಂತ ಕಥೆ ಇದೆ. ಅದೇನೆಂದರೆ, ಕುರುಬ ಹುಡುಗ ಒಮ್ಮೆ ಈ ಬೆಟ್ಟದ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ದೇವರ ವಿಗ್ರಹವನ್ನು ಕಂಡನಂತೆ. ಈ ವಿಷಯ ಕಾಕತೀಯ ರಾಜವಂಶದ ಆಡಳಿತಗಾರನಿಗೆ ತಲುಪಿತು. ತದನಂತರ ರಾಜನು ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಲು ನಿರ್ಧರಿಸಿದರಂತೆ. ಹಾಗಾಗಿಯೇ ಈ ಕೋಟೆಗೆ ಗೋಲ್ಕೊಂಡ ಬೆಟ್ಟ ಅಥವಾ ಕುರುಬನ ಬೆಟ್ಟ ಎಂದು ಕರೆಯಲಾಯಿತು.

ಸುಮಾರು 200 ವರ್ಷಗಳ ನಂತರ ಕೋಟೆಯು ಬಹುಮನಿ ಆಡಳಿತದ ಅಡಿಯಲ್ಲಿ ಬಂದಿತು. ನಂತರ ಕುತುಬ್‌ ಶಾಹಿ ರಾಜರು ಕೋಟೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಮತ್ತಷ್ಟು ವಿಸ್ತರಿಸಿದರು.

 
 
 
 
 
 
 
 
 
 
 

Leave a Reply