ಯೋಗದಿಂದ ಆರೋಗ್ಯ ವೃದ್ಧಿ – ಆನಂದ್ ಸಿ ಕುಂದರ್

ಕೋಟ: ಯೋಗದಿಂದ ಆರೋಗ್ಯ ವೃದ್ಧಿಸುವ ಜೊತೆಗೆ ಮನೋಲ್ಲಾಸ ಹೆಚ್ಚಿಸುತ್ತದೆ ಎಂದು ಕೋಟದ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದ್ದಾರೆ.

ಕೋಟ ರಾಜಶೇಖರ ದೇವಳದಲ್ಲಿ ಶ್ರೀ ಪಂತಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟ ಇವರು ಆಯೋಜಿಸಿದ ೪೮ದಿನಗಳ ಉಚಿತ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಮುನುಷ್ಯ ಸುಲಭ ವಿಧಾನಗಳಿಗೆ ಮಾರುಹೋಗಿ ತನ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾನೆ ಇದರ ಪರಿಣಾಮದಿಂದ ನಾನಾ ರೀತಿಯ ಖಾಯಿಲೆಗಳು ಸೃಷ್ಢಿಸಿಕೊಳ್ಳುತ್ತಿದ್ದಾನೆ ಹೀಗಾದರೆ ಮುಂದಿನ ದಿನಗಳಲ್ಲಿ ಬಾರಿ ಪರಿಣಾಮ ಎದುರಿಸಬೇಕಾದಿತು ಅದಕ್ಕಾಗಿ ನಾವುಗಳು ಯೋಗದ ಮೊರೆ ಹೋಗುವ ಅಗತ್ಯತೆಯನ್ನು ಮನಗಾಣಿಸಿದರು.
ಅಧ್ಯಕ್ಷತೆಯನ್ನು ಶ್ರೀ ಪತಂಜಲಿ ಯೋಗ ಶಿಕ್ಷಣಾ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಚಂದ್ರಶೇಖರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಉಪಸ್ಥಿತರಿದ್ದರು .ಯೋಗ ಶಿಕ್ಷಣಾ ಸಮಿತಿ ಉಡುಪಿ ಇದರ ಆರ್ ಜಿ ಬಿರಾದಾರ ಪ್ರಾಸ್ತಾವನೆಗೈದರು.ಸಮಿತಿಯ ಯೋಗ ಶಿಕ್ಷಕ ಅರವಿಂದ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿನಯ ದೇವಾಡಿ ನಿರೂಪಿಸಿದರು.ಕೋಟ ರಾಜಶೇಖರ ದೇವಸ್ಥಾನದ ಯೋಗ ಶಿಬಿರದ ಸಂಯೋಜಕ ಗೋಪಾಲಕೃಷ್ಣ ಅಡಿಗ ವಂದಿಸಿದರು.

ಕೋಟ ರಾಜಶೇಖರ ದೇವಳದಲ್ಲಿ ಶ್ರೀ ಪಂತಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟ ಇವರು ಆಯೋಜಿಸಿದ ೪೮ದಿನಗಳ ಉಚಿತ ಯೋಗ ಶಿಬಿರವನ್ನು ಕೋಟದ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ಶ್ರೀ ಪತಂಜಲಿ ಯೋಗ ಶಿಕ್ಷಣಾ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಚಂದ್ರಶೇಖರ, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply