ಅಂಬೇಡ್ಕರ್ ಭವನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೆಸಿಐ ಕಲ್ಯಾಣಪುರ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಲೀಜನ್ ಸಹಭಾಗಿತ್ವದಲ್ಲಿ ವಿವೇಕನಂದ ಯೋಗ ವಿಜ್ಞಾನ ಕೇಂದ್ರ ಪುತ್ತೂರು ಉಡುಪಿ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಯೋಗ ತರಬೇತುದಾರರಾದ ಶೀಲಾ ನಾಯಕ್ ರವರು ನೆರವೇರಿಸಿದರು. ಜೆಸಿಐ ಕಲ್ಯಾಣಪುರ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಟೆಂಪಲ್ ಸಿಟಿ ವತಿಯಿಂದ ಯೋಗ ತರಬೇತುದಾರರಾದ ಶೀಲಾ ನಾಯಕ್ ರವರಿಗೆ ಸನ್ಮಾನಿಸಲಾಯಿತು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ರಾಷ್ಟ್ರೀಯ ನಿರ್ದೇಶಕರಾದ ನವೀನ್ ಶಂಕರ್ ಪುರ ರವರು ಮುಖ್ಯ ಅಥಿತಿಯಾಗಿ ಅಂತರಾಷ್ಟ್ರೀಯ ಯೋಗ ದಿನ ದ ಮಹತ್ವವನ್ನು ತಿಳಿಸಿ ಶುಭಹಾರೈಸಿದರು. ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು ಜೆಸಿಐ ಕಲ್ಯಾಣಪುರದ ಅಧ್ಯಕ್ಷೆ ಜೇಸಿ ಜಯಶ್ರೀ ಮಿತ್ರ ವಹಿಸಿದರು. ಉಡುಪಿ ಟೆಂಪಲ್ ಸಿಟಿ ಲೀಜನ್ ನ ಅಧ್ಯಕ್ಷರಾದ ಜಗದೀಶ್ ಜಗದೀಶ್ ಕೆಮ್ಮಣ್ಣು ರವರು ಸ್ವಾಗತಿಸಿದರು. ಯೋಗ ಮಾಹಿತಿ ಹಾಗು ತರಬೇತಿಯನ್ನು ಶ್ರೀಮತಿ ಶೀಲ ನಾಯಕ್ ಹಾಗೂ ಶ್ರೀಮತಿ ಸುನೀತಾ ರವರು ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಪೂರ್ವ ಧ್ಯಕ್ಷರಾದ ಜೆಸಿ ತುಲಸೀದಾಸ್ ಸಾಲಿಯನ್, ಮಿತ್ರ ಕುಮಾರ್, ಆಶಾ ಆಲನ್, ಕಾರ್ಯದರ್ಶಿ ಅನುಸೂಯ ಅನಿಲ್ ಸದಸ್ಯರಾದ ಪದ್ಮನಾಭ, ಲವೀನಾ ಲುವಿಸ್, ಮಲ್ಲಿಕಾ ರಮೇಶ್ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply