ಏನ್ ಸಮಾಚಾರ ~ ಆಸ್ಟ್ರೋ ಮೋಹನ್

ಏನ್ ಸಮಾಚಾರ ? ಅಂದ ತತ್ ಕ್ಷಣ ನೆನಪಾಗುವುದು ” ಮಂಗಳೂರು ಸಮಾಚಾರ ” 1843 ಜುಲೈ 1 ಈ ಪತ್ರಿಕೆ ಜನಿಸಿ ಕರ್ನಾಟಕ ಪತ್ರಿಕೋದ್ಯಮಕ್ಕೆ ಹೊಸ ಭಾಷೆಯನ್ನು ಬರೆಯಿತು. ಕನ್ನಡ ನಾಡು ನುಡಿಗೆ ವಿಶೇಷ ಕೊಡುಗೆ ನೀಡಿದ್ದನ್ನು ಯಾರೂ ಮರೆಯುವಂತಿಲ್ಲ. 

ನಂತರ ಕರ್ನಾಟಕದಲ್ಲಿ ಕನ್ನಡ ದೈನಿಕಗಳು ಕನ್ನಡತಾಯಿಯ ಮುಕುಟಕ್ಕೆ ಅನರ್ಘ್ಯ ರತ್ನಗಳನ್ನು ಪೋಣಿಸುತ್ತಾ ಬರುತ್ತಿವೆ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಕರುನಾಡಿನಲ್ಲಿ ಕನ್ನಡದ ಕಂಪು ಮಂಪರಿಗೆ ಜಾರುತ್ತಿದೆ. ನಗರದಲ್ಲಂತೂ ಕನ್ನಡ ಕಣ್ಮರೆಯೇ ಆಗಿಬಿಡುತ್ತದೆಯೇನೋ ಎಂಬ ಆತಂಕವಿದೆ.ನಡು ಮತ್ತು ಹಿರಿಯ ವಯಸ್ಸಿನವರು ಮಾತ್ರ ಕನ್ನಡದ ಕಡೆಗೆ ಒಲವು ತೋರಿದರೆ ಸಾಲದು ಮಕ್ಕಳು ಮತ್ತು ಯುವ ಜನಾಂಗ ನಮ್ಮ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೂ ” ಜೀವಂತ “ವಾಗಿ ಹಸ್ತಾಂತರಿಸಬೇಕಾದ ಜವಾಬ್ದಾರಿ ಇದೆ.

 
 
 
 
 
 
 
 
 
 
 

Leave a Reply