ಚಾತುರ್ಮಾಸ ವ್ರತ ಸಂಕಲ್ಪಿತರಾದ ಶ್ರೀಪಾದರುಗಳಿಗೆ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಗುರುವಂದನೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ವರ್ಷಂ ಪ್ರತಿಯಂತೆ ಚಾತುರ್ಮಾಸ್ಯ ವ್ರತ ನಿರತರಾದ ಶ್ರೀಪಾದರುಗಳಿಗೆ ಗುರುವಂದನೆ ಸಲ್ಲಿಸಲಾಯಿತು,
ಮೊದಲಿಗೆ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರಿಗೆ ಗುರುವಂದನೆ ನಡೆಯಿತು. ಅವರು ಆಶೀರ್ವಚನ ನೀಡಿ ಪರಿಷತ್ತಿನ ಸದಸ್ಯರು ಪ್ರತಿ ವರ್ಷ ಮರೆಯದೆ ಚಾತುರ್ಮಾಸ ಕಾಲದಲ್ಲಿ ಗುರುಗಳಿಗೆ ಗೌರವ ಸಲ್ಲಿಸುತ್ತಿದ್ದಾರೆ. ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದು ಸಮಾಜಕ್ಕೆ ಇನ್ನಷ್ಟು ಸೇವೆ ದೊರೆಯುವಂತಾಗಲಿ ಎಂದು ಹರಸಿದರು.
ಅನಂತರ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಗೆ, ಪುತ್ತಿಗೆ ಮೂಲಮಠದಲ್ಲಿ ಕಿರಿಯ ಮಠಾಧೀಶರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ, ಕುಂಜಾರಗಿರಿ ದುರ್ಗಾದೇವಿ ದೇವಳದಲ್ಲಿ ಅದಮಾರು ಹಿರಿಯ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಗೆ ಹಾಗೂ ಪಲಿಮಾರು ಮೂಲಮಠದಲ್ಲಿ ಕಿರಿಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾ ರಾಜೇಶ್ವರ ತೀರ್ಥ ಶ್ರೀಪಾದರಿಗೆಗುರುವಂದನೆ ಸಲ್ಲಿಸಲಾಯಿತು. ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ, ಕಾರ್ಯದರ್ಶಿ ವಿವೇಕಾನಂದ ಎನ್. ,ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಸದಸ್ಯರುಗಳಾದ ರಂಜನ್ ಕಲ್ಕೂರ, ವಿಷ್ಣು ಪ್ರಸಾದ್ ಪಾಡಿಗಾರ, ಕೆ ರಘುಪತಿ ರಾವ್, ರವೀಂದ್ರ ಆಚಾರ್ಯ, ಕೇಶವರಾವ್, ಗುರುಪ್ರಸಾದ್, ಶ್ರೀಪತಿ ಉಪಾಧ್ಯಾಯ, ಶಿವ ಚರಣ್, ಸುಮಿತ್ರ ಕೆರೆಮಠ, ದಿವ್ಯ ವಿ. ಪಾಡಿಗಾರ್, ಶ್ರೀದೇವಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply