ಪ್ರತಿಷ್ಠಿತ ಕಾಪು ವಿಧಾನಸಭಾ ಕ್ಷೇತ್ರಕ್ಕೆ ಮೀನುಗಾರ ಮುಖಂಡ, ಯುವ ಮುಂದಾಳು ಯಶ್ ಪಾಲ್ ಸುವರ್ಣರವರಿಗೆ ಬಿಜೆಪಿ ಪಕ್ಷದಿಂದ ಬಹುತೇಕ ಸೀಟು ಖಚಿತವಾಗಿದೆ. ಹಲವಾರು ಸಾಮಾಜಿಕ ಕಾರ್ಯಕ್ರಮ ಗಳನ್ನು ಹಮ್ಮಿ ಕೊಳ್ಳುವ ಮೂಲಕ ಎಲ್ಲರ ಮನೆ ಮಾತಾಗಿರುವ ಇವರಿಗೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ದೊರಕುವ ಎಲ್ಲಾ ಸಾಧ್ಯತೆ ಇದೆ.
ಮೂರು ಬಾರಿ ಕಾಪು ಕ್ಷೇತ್ರವನ್ನು ಪ್ರತಿನಿಧಿಸಿದ ಲಾಲಾಜಿ ಆರ್ ಮೆಂಡನ್ ರವರ ಜಾಗಕ್ಕೆ ಯುವ ಮುಂದಾಳು ಯಶ್ ಪಾಲ್ ರವರಿಗೆ ಬಡ್ತಿ ದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ. ಇವರಿಗೆ ಎಲ್ಲಾ ಸಮುದಾಯದ ಬೆಂಬಲವಿದೆ. ಪಕ್ಷದ ಆಂತರಿಕ ಸರ್ವೆಯಲ್ಲಿ ಎಲ್ಲರಿಗಿಂತ ಮುಂದೆ ಸುವರ್ಣ ರವರಿದ್ದಾರೆ. ತಳ ಮಟ್ಟದ ಕಾರ್ಯಕರ್ತರಿಂದ ಹಿಡಿದು, ಕೇಂದ್ರ ನಾಯಕರೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಇವರಿಗೆ ಸೀಟು ದಕ್ಕಿಸಿಕೊಳ್ಳಲು ಕಷ್ಟ ಆಗಲಾರದು.
ಕರ್ನಾಟಕದ ಕರಾವಳಿ ಜಿಲ್ಲೆಗಳ ಬಿಜೆಪಿ ಪಕ್ಷದ ವ್ಯವಸ್ಥೆಯೊಳಗೆ, ಯಶಪಾಲ್ ಆನಂದ್ ಸುವರ್ಣ ಅವರು ಉದಯೋನ್ಮುಖ ತಾರೆಯಾಗಿದ್ದಾರೆ. ಗೋರಕ್ಷಕರಾಗಿ, ಎಬಿವಿಪಿ ನಾಯಕರಾಗಿ, ಬಜರಂಗದಳದ ಕಾರ್ಯ ಕರ್ತರಾಗಿ, ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಭವಿಷ್ಯದ ಶಾಸಕರಾಗಿ 44ರ ಹರೆಯದ ಅವರು ಉಡುಪಿಯ ಸರ್ಕಾರಿ ಪಿಯು ಬಾಲಕಿಯರ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರೂ ಆಗಿದ್ದಾರೆ.
ಹಿಜಾಬ್ ವಿಷಯ ಬಂದಾಗ ನೆಲದ ಕಾನೂನನ್ನು ಪಾಲಿಸದವರು ದೇಶವಿರೋಧಿಗಳು ಎಂದವರು ಸುವರ್ಣರು. ಸುವರ್ಣ ಅವರು ಕಳೆದ 13 ವರ್ಷಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಹಕಾರಿ ಮೀನು ಮಾರಾಟ ಒಕ್ಕೂಟದ ವಿವಿಧ ಹುದ್ದೆಗಳನ್ನು ನಿಭಾಯಿಸಿ ಅಧ್ಯಕ್ಷರಾಗಿದ್ದಾರೆ. ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ ಬ್ಯಾಂಕ್ ಸರ್ವತೋಮುಖ ಅಭಿವೃದ್ಧಿ ಹೊಂದಲು ಪ್ರಮುಖ ಕಾರಣರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಸುವರ್ಣ ಅವರು ಕಾಪು ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಸಮಗ್ರವಾಗಿ ಜೀರ್ಣೋದ್ದಾರಗೊಂಡಿದೆ. ಅದರಲ್ಲಿ ತನ್ನನ್ನು ವಿಶೇಷವಾಗಿ ತೊಡಗಿಸಿಕೊಂಡ ಸುವರ್ಣರವರಿಗೆ ತಾಯಿ ಮಹಾಲಕ್ಷ್ಮೀ ಕೈ ಹಿಡಿಯುವಳೇ ಎಂದು ಕಾದು ನೋಡಬೇಕಾಗಿದೆ.
~ ಜೆಕೆ