ಸಾವರ್ಕರ್ ಬ್ಯಾನರ್ ಮಾತ್ರವಲ್ಲ ಅದೇ ಜಾಗದಲ್ಲಿ ಪ್ರತಿಮೆ ನಿರ್ಮಿಸಲು ಸಿದ್ದ : ಯಶ್ ಪಾಲ್ ಸುವರ್ಣ ಎಚ್ಚರಿಕೆ

ಉಡುಪಿಯ ಬ್ರಹ್ಮಗಿರಿ ವೃತ್ತದಲ್ಲಿ ಅಳವಡಿಸಿರುವ ದೇಶಭಕ್ತ ವೀರ ಸಾವರ್ಕರ್ ಮತ್ತು ಸುಭಾಷ್ ಚಂದ್ರ ಬೋಸ್ ರವರ ಚಿತ್ರವುಳ್ಳ ಬ್ಯಾನರ್ ತೆರವುಗೊಳಿಸಲು ಒತ್ತಡ ಹೇರುತ್ತಿರುವ ಕಾಂಗ್ರೆಸ್ ಹಾಗೂ ಮತಾಂಧ ಶಕ್ತಿಗಳ ವಿರುದ್ಧ ಕಿಡಿಕಾರಿರುವ  ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಬ್ಯಾನರ್ ತೆರವುಗೊಳಿಸುವ ದುಸ್ಸಾಹಸಕ್ಕೆ ಮುಂದಾದಲ್ಲಿ ಅದೇ ಜಾಗದಲ್ಲಿ ವೀರ ಸಾವರ್ಕರ್ ರವರ ನಿರ್ಮಿಸಲು ಸಿದ್ದ ಎಂದು ಎಚ್ಚರಿಕೆ ನೀಡಿದ್ದಾರೆ.
ವಿನಾಯಕ ದಾಮೋದರ್ ಸಾವರ್ಕರ್ ಈ ಹೆಸರು ಕೇಳಿದರೆ ಈಗಲೂ ಯುವಕರು ರೋಮಾಂಚನಗೊಳ್ಳುತ್ತಾರೆ. ತಮ್ಮ ಜೀವನವನ್ನು ಸ್ವಾತಂತ್ರಕ್ಕಾಗಿ ಮುಡಿಪಾಗಿಟ್ಟ ಮಹಾನ್‌ ನಾಯಕ. ಸ್ವಾತಂತ್ರ್ಯ ಹೋರಾಟ, ಹಿಂದುತ್ವದ ಬಗ್ಗೆ ಇವರು ತೆಗೆದುಕೊಂಡ ನಿಲುವುಗಳು ಈಗಲೂ ಯುವಕರಿಗೆ ಸ್ಪೂರ್ತಿದಾಯಕರಾಗಿದ್ದಾರೆ.
 ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಸಾವರ್ಕರ್‌ ಅವರನ್ನು ಅಂಡಮಾನ್‌ನ ಕಾಲೇಪಾನಿನಲ್ಲಿನ ಜೈಲಿನಲ್ಲಿ ಬಂಧಿಸಿ ಜೈಲಿನಲ್ಲಿ ಚಿತ್ರಹಿಂಸೆಯನ್ನು ಅನುಭವಿಸಿ ಸುದೀರ್ಘ ಅವಧಿಯನ್ನು ಕಳೆದ ಮೊದಲ ವ್ಯಕ್ತಿ ಮತ್ತು ಬ್ರಿಟಿಷ್ ಸರ್ಕಾರದಿಂದ ಒಂದು ಜನ್ಮಕ್ಕೆ ಮಾತ್ರವಲ್ಲದೆ ಎರಡು ಜೀವಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದ ವಿಶ್ವದ ಏಕೈಕ ಕ್ರಾಂತಿಕಾರಿ ವೀರ ಸಾವರ್ಕರ್ ಅಪ್ರತಿಮ ಹೋರಾಟಗಾರನ ಬ್ಯಾನರ್ ತೆರವುಗೊಳಿಸುವಲ್ಲಿ ದೇಶವಿರೋಧಿ ಮತಾಂಧ ಶಕ್ತಿಗಳ ಪ್ರಯತ್ನ  ಯಶಸ್ವಿಯಾಗಲು ಬಿಡುವುದಿಲ್ಲ.
ದೇಶದ ಆಂತರಿಕ ಭದ್ರತೆಗೆ ಸದಾ ಸವಾಲೊಡ್ಡುವ ದೇಶದ್ರೋಹಿ ಸಂಘಟನೆಗಳು ಈಗಾಗಲೇ ಸಿ ಎ ಎ, ಹಿಜಾಬ್  ಮೂಲಕ ವಿವಾದ ಸೃಷ್ಟಿಸಿದ್ದು ಇದರ ಮುಂದುವರಿದ ಭಾಗವಾಗಿ ಸಾವರ್ಕರ್ ರವರನ್ನು ಅಪಮಾನಿಸುವ ಕಾರ್ಯದಲ್ಲಿ ಮುಂದಾಗಿದೆ. ದೇಶಭಕ್ತ ಸಾವರ್ಕರ್ ರವರನ್ನು  ಅಪಮಾನಿಸುವ ಮೂಲಕ ಕಾಂಗ್ರೆಸ್ ನಾಯಕರ ನಕಲಿ ದೇಶಪ್ರೇಮದ ಮುಖವಾಡ ಕಳಚಿ ಬಿದ್ದಿದೆ.
ಜಾಗೃತ ದೇಶಭಕ್ತ ಜನತೆಯ ಸಹಕಾರದಿಂದ ಮುಂದಿನ ದಿನಗಳಲ್ಲಿ ನಗರದ ಗಲ್ಲಿ ಗಲ್ಲಿಯಲ್ಲಿ ಸಾವರ್ಕರ್ ಬ್ಯಾನರ್ ಅಳವಡಿಸುವ ಅಭಿಯಾನ ಆರಂಭಿಸಿ ಮತಾಂಧ ಶಕ್ತಿಗಳಿಗೆ ದಿಟ್ಟ ಉತ್ತರ ನೀಡಲು ಸಿದ್ದ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Leave a Reply