ರೂ.1250 ಕೋಟಿ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಮುಖ್ಯಮಂತ್ರಿಗಳ ಜನಪರ ನಿರ್ಧಾರ ಸ್ವಾಗತಾರ್ಹ~ಯಶ್ ಪಾಲ್ ಸುವರ್ಣ

ಆರ್ಥಿಕ ಸಂಕಷ್ಟದ ನಡುವೆಯೂ ಜನಸಾಮಾನ್ಯರಿಗಾಗಿ ರೂ.1250 ಕೋಟಿ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಮುಖ್ಯಮಂತ್ರಿಗಳ ಜನಪರ ನಿರ್ಧಾರ ಸ್ವಾಗತಾರ್ಹ.

ಕರಾವಳಿ ಕರ್ನಾಟಕದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಮೀನುಗಾರಿಕೆ ಕ್ಷೇತ್ರ ಕೂಡಾ ಕೊರೊನಾ ಪರಿಣಾಮದಿಂದ ಸಂಕಷ್ಟಕ್ಕೀಡಾಗಿದ್ದು ಈ ನಿಟ್ಟಿನಲ್ಲಿ ಮೀನುಗಾರಿಕೆಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸಮಸ್ತ ಮೀನುಗಾರರ ಪರವಾಗಿ ಮನವಿ ಮಾಡುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ವಿಶೇಷ ಪ್ಯಾಕೇಜ್ ಮೂಲಕ ಮೀನುಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು ಹಾಗೂ ಮಹಿಳಾ ಮೀನುಗಾರರರಿಗೆ ಸಹಾಯಧನ, ಡೀಸೆಲ್ ಸಬ್ಸಿಡಿ ಶೀಘ್ರ ಬಿಡುಗಡೆ, ಮೀನುಗಾರಿಕೆ ಸಂಬಂಧಿ ಸಿದ ಸಾಲ ಮರುಪಾವತಿ ಕಾಲಾವಕಾಶ ವಿಸ್ತರಣೆ ಮಾಡಿ ಸಂಕಷ್ಟದ ಈ ಸಂದರ್ಭದಲ್ಲಿ ಮೀನು ಗಾರರಿಗೆ ಆರ್ಥಿಕ ಚೈತನ್ಯ ತುಂಬುವಲ್ಲಿ ರಾಜ್ಯ ಸರಕಾರ ಸಹಕರಿಸುವಂತೆ ಮನವಿ ಮಾಡು ವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply