ಕೋಟ – ಯಕ್ಷಸೌರಭ ಪ್ರಶಸ್ತಿ ಯಕ್ಷಗುರು ಕೂಡ್ಲಿ ದೇವದಾಸ್ ರಾವ್ ಗೆ ಪ್ರದಾನ

ಕೋಟ: ಯಕ್ಷರಂಗದ ಕಾಶಿ ಎಂದು ಕೋಟಕ್ಕೆ ಕರೆಯುತ್ತಾರೆ ಇದೊಂದು ಅಮೃತ ಭೂಮಿ ಅದರಲ್ಲಿ ಹವ್ಯಾಸಿ ಕಲಾವಿದರು ಕ್ರಾಂತಿಯನ್ನೆ ಸೃಷ್ಢಿಸಿದ್ದಾರೆ ಎಂದು ಯಕ್ಷಗಾನ ವಿದ್ವಾಂಸ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಹೆಚ್ ಸುಜಯೀಂದ್ರ ಹಂದೆ ಹೇಳಿದ್ದಾರೆ.

ಕೋಟದ ಹಿರೇಮಹಾಲಿಂಗೇಶ್ವರ ಬಳಿ ಶುಕ್ರವಾರದಂದು ಯಕ್ಷಸೌರಭ ಹಿರೇಮಹಾಲಿಂಗೇಶ್ಚರ ಕಲಾರಂಗ ಇದರ ೭ನೇ ವರ್ಷದ ವಾರ್ಷಿಕೋತ್ಸವ ರಂಗಾರ್ಪಣಾ ೨೦೨೨ ರ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದು ಮಾತನಾಡಿ ಪ್ರಸ್ತುತ ಕಾಲಘಟ್ಟದ ಯಕ್ಷಗಾನ ಸಾಗಬೇಕಾದ ದಾರಿಯಲ್ಲಿ ಸಾಗದಿರುವುದು ವಿಪರ್ಯಾಸವೇ ಸರಿ ಆದರೆ ಅದಕ್ಕೆ ಪರ್ಯಾಯವಾಗಿ ಹವ್ಯಾಸಿ ಕಲಾವಿದರು ಸಂಪ್ರದಾಯಕ್ಕೆ ಚುತಿ ಬಾರದ ರೀತಿಯಲ್ಲಿ ಬದ್ಧತೆಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ ಇದು ಯಕ್ಷಗಾನದ ತಳಹದಿಗೆ ಕೈಹಿಡಿದ ಕೈಗನ್ನಡಿ,ಯಕ್ಷಗಾನದಲ್ಲಿ ಅನುಕರಣೆ ಸಲ್ಲ ಬದಲಾಗಿ ಅನುಸರಣೆ ಬೇಕು ನಾವು ಇಂಥಹ ಕಲೆಯಲ್ಲಿಅಧ್ಯಯನಶೀಲರಾಗಿ ಕಾರ್ಯೋನ್ಮುಖರಾಗುವ ಅವಶ್ಯಕತೆಯನ್ನು ಮನಗಾಣಿಸಿದರು.ಯಕ್ಷಗಾನ ಕ್ಷೇತ್ರದಲ್ಲಿ ಶಿವರಾಮ ಕಾರಂತರ ಗರಡಿಯಲ್ಲಿ ಬೆಳೆದ ದೇವದಾಸ ರಾವ್ ಇವರ ಗುರುತಿಸುವಿಕೆ ಅರ್ಥಪೂರ್ಣ ಎಂದು ಅಭಿಮತವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಕೊಲ್ಲೂರು ದೇವಳದ ಟ್ರಸ್ಟಿ ಬೆಳ್ವೆ ಗಣೇಶ್ ಕಿಣಿ ಉದ್ಘಾಟಿಸಿದರು.
ಯಕ್ಷಸೌರಭ ಪ್ರಶಸ್ತಿ ಯಕ್ಷಗುರು ಕೂಡ್ಲಿ ದೇವದಾಸ್ ರಾವ್ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಅವರು ಯಕ್ಷಪರಂಪರೆಯಿAದ ಇದ್ದ ಕುಟುಂಬ ನನ್ನದು ,ನನ್ನ ಹಿರಿಯರು ಹಾಕಿಕೊಟ್ಟ ಕಲಾರಾಧನೆ ಈ ಎತ್ತರಕ್ಕೆ ಬೆಳೆಯುವಂತೆ ಮಾಡಿದೆ.ಕಾರಂತರ ಒಡನಾಟ ,ಪತ್ನಿಯ ಪ್ರೋತ್ಸಾಹ ಯಕ್ಷರಂಗದಲ್ಲಿ ಉಳಿಯುವಂತೆ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಹವ್ಯಾಸಿ ಕಲಾವಿದರಾದ ಶೀನ ಭಂಡಾರಿ ಗಿಳಿಯಾರು, ಎಸ್ ರುದ್ರಯ್ಯ ಆಚಾರ್ಯ ಸಾಯ್ಬಿçಕಟ್ಟೆ,ಕೆ.ಬಿ ಐತ ನೆಲ್ಲಿಬೆಟ್ಟು ಇವರುಗಳಿಗೆ ಸೌರಭ ಸಂಮಾನ ನೀಡಲಾಯಿತು.ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಿಗೆ ಗುರುವಂದನೆ ಸಲ್ಲಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಕೊಲ್ಲೂರು ದೇವಳದ ಟ್ರಸ್ಟಿ ಕೆ.ಪಿ ಶೇಖರ್ ಸಾಲಿಗ್ರಾಮ, ಕೋಟೇಶ್ಚರ ಗ್ರಾಮಪಂಚಾಯತ್ ಸದಸ್ಯೆ ಲೋಲಾಕ್ಷಿ ಎನ್ ಕೊತ್ವಾಲ್,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಯಕ್ಷ ಸೌರಭ ಹಿರೇಮಹಾಲಿಂಗೇಶ್ಚರ ಕಲಾರಂಗ ಅಧ್ಯಕ್ಷ ಪ್ರಶಾಂತ್ ಪೂಜಾರಿ ಪಡುಕರೆ,ಕದ್ರಿ ಮಂಜುನಾಥೇಶ್ಚರ ದೇವಳ ಟ್ರಸ್ಟಿ ಕುಸುಮಾ ಹೆಚ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಹರೀಶ್ ದೇವಾಡಿಗ ಸ್ವಾಗತಿಸಿದರು. ಗೌರವ ಸಲಹೆಗಾರ ಟಿ.ಮಂಜುನಾಥ ಗಿಳಿಯಾರು ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯಕ್ರಮವನ್ನು ಸಂಘದ ಮಾಜಿ ಅಧ್ಯಕ್ಷ ಮಂಜುನಾಥ ಭಂಡಾರಿ ,ರಾಜೇಶ್ ಕರ್ಕೇರ ನಿರೂಪಿಸಿ ವಂದಿಸಿದರು.

ಗಮನ ಸೆಳೆದ ಜೋಡಾಟ
ವಾರ್ಷಿಕೋತ್ಸವದ ಅಂಗವಾಗಿ ಪ್ರಚಂಡ ಜೋಡಾಟ ಏರ್ಪಡಿಸಲಾಗಿದ್ದು ಯಕ್ಷಲೋಕದ ಹವ್ಯಾಸಿ ಮಹಿಳಾ ಕಲಾವಿದರಿಂದ ಒಂದೆಡೆ ಸ್ಪರ್ಧಾ ಯಕ್ಷಗಾನ ನಡೆದರೆ ಅದಾದ ನಂತರ ಹವ್ಯಾಸಿ ಪುರುಷ ಕಲಾವಿದರಿಂದ ಮಾಯಾಪುರಿ ಮಹಾತ್ಮೆ ಹಾಗೂ ವೀರಮಣಿ ಕಾಳಗ ಪ್ರದರ್ಶನಗೊಂಡಿತು.

 
 
 
 
 
 
 
 
 
 
 

Leave a Reply