ಪ್ರೀ ವೆಡ್ಡಿಂಗ್ ಶೂಟ್ ತಂದ ಆಪತ್ತು

ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೇಳೆ ಆಯತಪ್ಪಿ ನದಿಗೆ ಬಿದ್ದು, ಮದುಮಗ ಮೃತಪಟ್ಟರೆ, ಮದುಮಗಳು ಆಸ್ಪತ್ರೆ ಸೇರಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೋಯಿಕ್ಕೋಡ್ ನ ಕಡಿಯಂಗಡ ಮೂಲದ ರಜಿಲ್ ಹಾಗೂ ಕಾರ್ತಿಕಾ ನಡುವೆ ಮದುವೆ ನಿಶ್ಚಿಯವಾಗಿತ್ತು. ಮಾರ್ಚ್ 14 ರಂದು ಇಬ್ಬರ ಎಂಗೇಜ್ ಮೆಂಟ್ ಕೂಡ ನಡೆದಿತ್ತು. ಮದುವೆಗೆ ಕೆಲವೇ ದಿನಗಳಿತ್ತು.

ಕೋಯಿಕ್ಕೋಡ್ ಬಳಿಯ ಕುಟ್ಟಿಯಾಡಿ ನದಿಯಲ್ಲಿ ರೆಜಿಲ್ ಹಾಗೂ ಕಾರ್ತಿಕಾರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಡೆಯುತ್ತಿತ್ತು. ಇಬ್ಬರು ಫೋಟೋ ಶೂಟ್ ನಲ್ಲಿ ಮೈಮರೆತಿದ್ದರು. ಫೋಟೋಗೆ ಪೋಸ್ ನೀಡುವಾಗ ಆಯ ತಪ್ಪಿ ಇಬ್ಬರು ನದಿಗೆ ಬಿದ್ದರು. ನದಿಗೆ ಬಿದ್ದವರ ಕೂಗಾಟ ಕೇಳಿದ ಸ್ಥಳಿಯರು ಇಬ್ಬರನ್ನು ನದಿಯಿಂದ ಮೇಲೆತ್ತಿದ್ದಾರೆ.

ತಕ್ಷಣ ಇಬ್ಬರನ್ನು ಸನಿಹದ ಮಲಬಾರ್ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಯಿತು. ಆದರೆ ರೆಜಿಲ್ ಆ ವೇಳೆಗಾಗಲೇ ಮೃತಪಟ್ಟಿದ್ದನು. ಕಾರ್ತಿಕಾ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 
 
 
 
 
 
 
 
 
 
 

Leave a Reply