ಕೊಡವೂರು ವಾರ್ಡಿನ ಮನೆಗಳ ಬಾವಿಗೆ ಔಷಧಿ

ಸೆಪ್ಟೆಂಬರ್ 26 ರಂದು ಕೊಡವೂರು ​ವಾರ್ಡಿನ ​ಮನೆಗಳ ಬಾವಿಗೆ ಔಷದ ಹಾಕುವ ಕಾರ್ಯ ನಡೆಯಿತು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನಿಶಾ.ವಿ ಹಾಗೂ ಕಿರಿಯ ಆರೋಗ್ಯ ಸಹಾಯಕ ಮಂಜುನಾಥ್ ಎನ್ ಇವರ ಮುಂದಾಳತ್ವದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಸದಸ್ಯರಾದ ಕೆ ವಿಜಯ್ ಕೊಡವೂರು ಮಾತನಾಡಿ, ಸರಕಾರದ ಅಧಿಕಾರಿಗಳನ್ನು ಕರೆದು ಪರಿಹಾರ ಕಾರ್ಯವನ್ನು ಪ್ರಾರಂಭಿಸಿದ್ದೇವೆ, ನೆರೆಯ ನೀರಿನಿಂದ ಸಾಂಕ್ರಾಮಿಕ ರೋಗ ಬರದಂತೆ ಬಾವಿಗಳಿಗೆ ರೋಗ ನಿರೋಧಕ ಔಷಧ ಹಾಕುವ ಕಾರ್ಯ ನಡೆದಿದೆ.

ನೆರೆ ಬಂದ ತಕ್ಷಣ ಊರಿನ ಹಿರಿಯರೊಂದಿಗೆ ಸಭೆ ನಡೆಸಿ 4 ಅಂಶಗಳ ಬಗ್ಗೆ ಯೋಚನೆ ಮಾಡಲಾಗಿದೆ. ರಕ್ಷಣೆ, ಊಟ, ವಸತಿಗೆ ಗಂಜಿ ಕೇಂದ್ರ, ನೆರೆ ನೀರಿನಿಂದ ರೋಗ ಬರದಂತೆ ಔಷಧಿ ಸಿಂಪಡಣೆ್ ಹಾಗೂ ದಾನಿಗಳಿಂದ ಮತ್ತು ಸರಕಾರದ ವತಿಯಿಂದ ಪರಿಹಾರದ ಬಗ್ಗೆಯೂ ಚಿಂತಿಸಲಾಗಿದೆ.

ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಅದರಿಂದ ಸೊಳ್ಳೆ ಉತ್ಪತ್ತಿ ಆಗದಂತೆ ಔಷಧಿ ಸಿಂಪಡಿಸುವ ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ. ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾತ್ ಕೊಡವೂರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply