ವಿವೇಕದಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

ಕೋಟ: ಕೋಟ ವಿವೇಕ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಡಾ. ಅಂಬೇಡ್ಕರರವರ ಭಾವ ಚಿತ್ರಕ್ಕೆ ಪುಷ್ಫ ನಮನ ಸಲ್ಲಿಸುವುದರ ಮೂಲಕ ಅಂಬೇಡ್ಕರರ ೧೩೧ನೇ ಜಯಂತಿ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ. ಜಗದೀಶ ನಾವಡ ಮಾತನಾಡಿ, ಪ್ರಪಂಚ ಕಂಡ ಅಸಾಧಾರಣ ಓದುಗ, ಜ್ಞಾನಿ, ಕರುಣಾಳು, ಮಾನವತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್‌ರವರು ಇಂದು ಬದುಕಿಲ್ಲದಿದ್ದರೂ ಎಲ್ಲರ ಹೃದಯದಲ್ಲಿ ನೆಲೆಸಿರುವ ಮಹಾಚೇತನರಾಗಿದ್ದಾರೆ. ಅವರ ಜೀವನ ಪರಿಶ್ರಮ, ತ್ಯಾಗ ಆದರ್ಶ ಧ್ಯೇಯಗಳು ಯಾವಾಗಲೂ ಅನುಸರಣೀಯವಾಗಿದೆ. ಅವರು ಬೋಧಿಸಿರುವ ಜೀವನ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕೆಂದು ತಿಳಿಸಿದರು.
ವಿದ್ಯಾಸಂಸ್ಥೆಗಳ ಮುಖ್ಯೋಪಾಧ್ಯಾಯರಾದ ಕೆ. ಜಗದೀಶ ಹೊಳ್ಳ, ಭಾಸ್ಕರ ಆಚಾರ್ಯ, ವೆಂಕಟೇಶ ಉಡುಪರು ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಗಳ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೋಟ ವಿವೇಕ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಡಾ. ಅಂಬೇಡ್ಕರರವರ ಭಾವ ಚಿತ್ರಕ್ಕೆ ಪುಷ್ಫ ನಮನ ಸಲ್ಲಿಸುವುದರ ಮೂಲಕ ಅಂಬೇಡ್ಕರರ ೧೩೧ನೇ ಜಯಂತಿ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾಸಂಸ್ಥೆಗಳ ಮುಖ್ಯೋಪಾಧ್ಯಾಯರಾದ ಕೆ. ಜಗದೀಶ ಹೊಳ್ಳ, ಭಾಸ್ಕರ ಆಚಾರ್ಯ, ವೆಂಕಟೇಶ ಉಡುಪರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply