ವಿವೇಕ ವಿದ್ಯಾಸಂಸ್ಥೆಗಳ ಮುಖ್ಯಸ್ಥರ ಕಛೇರಿಯಲ್ಲಿ ಶಿಕ್ಷಕರ ದಿನಾಚರಣೆ

ಶಿಕ್ಷಕರ ದಿನಾಚರಣೆ ಯನ್ನು ವಿವೇಕ ವಿದ್ಯಾಸಂಸ್ಥೆಗಳ ಮುಖ್ಯಸ್ಥರ ಕಛೇರಿಯಲ್ಲಿ ವಿವೇಕ ಹಿಂದಿನ ವಿದ್ಯಾರ್ಥಿಗಳ ಸಂಘದ ಸದಸ್ಯರೆಲ್ಲರೂ ಸೇರಿ, ಪ್ರತಿಯೊಬ್ಬ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಬ್ಯಾಡ್ಜ್ ನ್ನು ತೊಡಿಸಿ ಹಾಗೂ ಸಿಹಿತಿಂಡಿ ಪೊಟ್ಟಣವನ್ನು ಕೊಟ್ಟು , ವಿಶಿಷ್ಟ ರೀತಿಯಿಂದ ಆಚರಿಸಿದರು.ದಿನಪೂರ್ತಿ ಶಿಕ್ಷಕರೆಲ್ಲರೂ ಆ ಬ್ಯಾಡ್ಜ್ ನ್ನು ಧರಿಸುವ ಮೂಲಕ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಿಕ್ಷಕರ ದಿನಾಚರಣೆ ಯ ಮಹತ್ವವನ್ನು ಪಸರಿಸಿದರು. ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸಿ. ರಮಾನಂದ ಭಟ್ಟರು ದಿನದ ಮಹತ್ವ ತಿಳಿಸಿ, ಶಿಕ್ಷಕರ ಪಾತ್ರ ಮಕ್ಕಳನ್ನು ಪೋಷಿಸಿ, ಬೆಳೆಸುವಲ್ಲಿ ಬಹಳ ಮಹತ್ತರ ಪಾತ್ರ ಹಾಗೂ ಮಕ್ಕಳ ಭವಿಷ್ಯ ಶಿಕ್ಷಕರು ನೀಡುವ ಶಿಕ್ಷಣದಿಂದ , ಸಿಗುತ್ತದೆ ಎಂದರು ಪ್ರಾರಂಭದಲ್ಲಿ ಉಪನ್ಯಾಸಕರಾದ ಜಿ. ಸಂಜೀವರು ಸ್ವಾಗತಿಸಿದರು ಸಮಾರಂಭದಲ್ಲಿ ಕೆ. ತಾರಾನಾಥಹೊಳ್ಳ, ಎಚ್. ವಿ. ಸೋಮಯಾಜಿ,ಶೀಮತಿ ಸುಶೀಲ ಹೊಳ್ಳ, ಉಮೇಶ ಉಡುಪ, ವೆಂಕಟೇಶ ಉಡುಪ, ನಾಗೇಶ ಶ್ಯಾನುಭೋಗ, ಸುಧಾಕರ, ಶ್ರೀಪತಿ ಹೇರ್ಳೆ, ಸುಪ್ರಭಾ, ಜನಾರ್ಧನ ಹಂದೆ, ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಪಿ. ಮಂಜುನಾಥ ಉಪಾಧ್ಯಾಯ ವಂದಿಸಿದರು.

 
 
 
 
 
 
 
 
 
 
 

Leave a Reply