ಕೋಟ ವಿವೇಕದ ಸಮಾಜ ಸಂಘದ ಉದ್ಘಾಟನೆ

ಕೋಟ : ಕೋಟ ವಿವೇಕ ಪ.ಪೂ.ಕಾಲೇಜಿನ ಸಮಾಜ ಸೇವಾ ಸಂಘದ ಉದ್ಘಾಟನೆಯ ಕಾರ್ಯಕ್ರಮವು ಸಂಸ್ಥೆಯ ಎಂ.ಜಿ.ಎo ಸಭಾಂಗಣದಲ್ಲಿ ಶುಕ್ರವಾರ ನೆರವೇರಿತು.

ಕೋಟ ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ,ಪತ್ರಕರ್ತ ರವೀಂದ್ರ ಕುಮಾರ್ ಕೋಟ ಸಂಪನ್ಮೂಲ ವ್ಯಕ್ತಿಯಾಗಿ ಸಮಾಜಸಂಘವನ್ನು ಉದ್ಘಾಟಿಸಿ, ಮಕ್ಕಳನ್ನುದ್ದೇಸಿ ಮಾತನಾಡಿ ಪರಿಸರ ಕಾಳಜಿ ಕೇವಲ ಒಂದು ವರ್ಷದಲ್ಲಿ ಒಂದು ದಿನಕ್ಕೆ ಸೀಮಿತವಾಗದೇ, ಅದು ನಿತ್ಯದ ಕಾಯಕವಾಗಬೇಕು. ವಿದ್ಯಾಭ್ಯಾಸದೊಂದಿಗೆ ಪರಿಸರದ ಕಾಳಜಿ, ಪ್ಲಾಸ್ಟಿಕ್ ಬಗೆಗಿನ ಮಾಹಿತಿ, ಪರಿಸರ ಆರೈಕೆ ಇನ್ನು ಮುಂತಾದ ಪರಿಸರಕ್ಕೆ ಸಂಬAಧಿಸಿದ ಕಾಯಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ಅಭ್ಯಾಗತರಾಗಿ ವಿವೇಕ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ,ವಿಜ್ಞಾನಿ ಡಾ. ಹರೀಶ್ ಕುಮಾರ್ ಮಧ್ಯಸ್ಥ, ಸಮಾಜ ಸಂಘದ ಕಾರ್ಯದರ್ಶಿ ಅನನ್ಯ, ಅಧ್ಯಕ್ಷೆ ಮಾರಿಸೆಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.. ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವಡ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.

ಈ ಕಾರ್ಯಕ್ರಮವನ್ನ ಸಮಾಜಸೇವಾ ಸಂಘ ಸಂಚಾಲಕ ಅಶೋಕ್‌ಕುಮಾರ್ ಶೆಟ್ಟಿ ಸಂಯೋಜಿಸಿದರು.

ಕಾರ್ಯಕ್ರಮದ ನಿರ್ವಹಣೆಯನ್ನು ಪ್ರಜ್ಞಾ ಹಂದೆ ನಿರ್ವಹಿಸಿದರು.

 
 
 
 
 
 
 

Leave a Reply