ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಸಂಸತ್ತಿನ ಚುನಾವಣೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ೨೦೨೨-೨೩ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ಇ.ವಿ.ಎಂ. ಆ್ಯಪ್ ಮೂಲಕ ನಡೆಸಿ ವಿದ್ಯಾರ್ಥಿ ಮುಖಂಡನ ಆಯ್ಕೆ ನಡೆಯಿತು.

ಇದರ ಸಲುವಾಗಿ ಮೊದಲ ದಿನವೇ ವಿದ್ಯಾರ್ಥಿ ಮುಖಂಡನ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ, ನಾಮಪತ್ರ ಪರಿಶೀಲನೆ ಹಾಗು ನಾಮಪತ್ರ ಸಲ್ಲಿಸುವಿಕೆ ಹಾಗು ನಾಮಪತ್ರ ಹಿಂತೆಗೆಯುವಿಕೆ ಪ್ರಕ್ರಿಯೆ ಕೂಡಾ ನಡೆಯಿತು.
ಈ ವರ್ಷ ವಿಶೇಷವಾಗಿ ಸಾರ್ವತಿಕ ಚುನಾವಣೆಯಂತೆ ಇ.ವಿ.ಎಂ. ಮಾದರಿಯಲ್ಲಿ ಮೊಬೈಲ್ ಆ್ಯಪ್‌ನ್ನು ಬಳಸಿ ವಿದ್ಯಾರ್ಥಿಗಳಿಗೆ ಮತದಾನ ಪ್ರಕ್ರಿಯೆ ಹೇಗೆ ಎಂಬುದನ್ನು ತಿಳಿಸಲಾಯಿತು.

ಮೊದಲಿಗೆ ತರಗತಿ ಮುಖಂಡ, ಉಪಮುಖಂಡ, ನಿಲಯಗಳ ಮುಖಂಡನ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ತದನಂತರ ಶಾಲಾ ಮುಖಂಡನ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿಗಳು ಪ್ರತಿಯೊಂದು ತರಗತಿಗೂ ತೆರಳಿ ಮತಯಾಚನೆ ಮಾಡಿದರು. ನಂತರ ಶಾಲಾ ಮುಖಂಡನ ಸ್ಥಾನಕ್ಕೆ ಚುನಾವಣೆ ನಡೆಯಿತು.

ಕಾಲೇಜು ವಿಭಾಗದಿಂದ ಎಂಟು(೮) ಮಂದಿ ವಿದ್ಯಾರ್ಥಿಗಳು, ಪ್ರೌಢಶಾಲಾ ವಿಭಾಗದಿಂದ 4 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಕಾಲೇಜು ವಿಭಾಗದಲ್ಲಿ ಶ್ರೀಶ ನಾಯಕ್ ವಿದ್ಯಾರ್ಥಿ ಮುಖಂಡ ಹಾಗು ಪ್ರೌಢಶಾಲಾ ವಿಭಾಗದಲ್ಲಿ ಕೇಶವ ಉಪಾಧ್ಯ ಉಪಮುಖಂಡನಾಗಿ ಆಯ್ಕೆಯಾದರು.

ಮತದಾನ ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಅಧ್ಯಾಪಕರು ಮತ್ತು ಸಿಬಂದಿ ವರ್ಗದವರು ಮತಗಟ್ಟೆ ಅಧಿಕಾರಿಗಳಾಗಿ ಸಹಕರಿಸಿದ್ದರು. ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಮತದಾನ ಕಾರ್ಯದಲ್ಲಿ ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಕೆ. ಜಗದೀಶ ನಾವಡ ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿ, ಅವರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ವಿವರಿಸಿದರು. ಉಪನ್ಯಾಸಕ ಗಣೇಶಕುಮಾರ ಶೆಟ್ಟಿ ಮತ್ತು ಶಿಕ್ಷಕಿ ರತಿ ಬಾಯಿ ಇವರು ಚುನಾವಣಾಧಿಕಾರಿಯಾಗಿ ಸಹಕರಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ವೆಂಕಟೇಶ ಉಡುಪ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply