Janardhan Kodavoor/ Team KaravaliXpress
26.6 C
Udupi
Monday, June 27, 2022
Sathyanatha Stores Brahmavara

ಕೋಟ ವಿವೇಕ ವಿದ್ಯಾ ಸಂಸ್ಥೆ ವಿಜ್ಞಾನವನ ಉದ್ಘಾಟನೆ ನಾಳೆ ಬೆಂಗಳೂರಿನ ಕ್ಯಾಪ್ಸ್ ಫೌಂಡೇಶನ್ ಕೊಡುಗೆ

ಕೋಟ :ಬೆಂಗಳೂರಿನ ಕ್ಯಾಪ್ಸ್ ಫೌಂಡೇಶನ್ ಮತ್ತು ಕೋಟ ವಿದ್ಯಾಸಂಘದ ಜಂಟಿ ಆಶ್ರಯದಲ್ಲಿ ಕ್ಯಾಪ್ಸ್ ಫೌಂಡೇಶನ್ ಅಮೃತ ಭಾರತ್ ೨೦೨೨ರ ಯೋಜನೆಯಡಿ ರಾಷ್ಟç ನಿರ್ಮಾಣದ ಕೊಡುಗೆಯಾಗಿ ಕೋಟ ವಿವೇಕ ವಿದ್ಯಾಸಂಸ್ಥೆಗಳ ಆವರಣದಲ್ಲಿ ರೂ.೨೫ಲಕ್ಷ ಅಂದಾಜಿನಲ್ಲಿ ನಿರ್ಮಿಸಲಾದ ಕ್ಯಾಪ್ಸ್ ಫೌಂಡೇಶನ್ ವಿವೇಕ ಸೈನ್ಸ್ ಪಾರ್ಕ್ನ ಉದ್ಘಾಟನಾ ಸಮಾರಂಭ ಇದೇ ೨೧ರಂದು ನಡೆಯಲಿದೆ.
ಕೋಟದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಕೋಟ ವಿದ್ಯಾ ಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ ಮಾಹಿತಿ ನೀಡಿ ಹೊರಾಂಗಣದಲ್ಲಿ ವೈಜ್ಞಾನಿಕ ಪ್ರಯೋಗಗಳ ಅಪರೂಪದ ಯೋಜನೆ ಇದಾಗಿದ್ದು, ಉಡುಪಿ ಜಿಲ್ಲೆಯಲ್ಲಿಯೇ ಮೊದಲ ಬಾರಿ ಎನ್ನುವಂತೆ ವಿದ್ಯಾಸಂಸ್ಥೆಯ ಆವರಣದಲ್ಲಿ ಈ ರೀತಿಯ ಯೋಜನೆ ಕಾರ್ಯಗತವಾಗುತ್ತಿರುವುದು ಪ್ರಶಂಸನೀಯ. ಪ್ರಯೋಗಾಲಯಗಳ ಒಳಭಾಗದಲ್ಲಿ ಪ್ರಯೋಗಗಳ ಮೂಲಕ ಅರಿಯಬಹುದಾದ, ವಿಶೇಷವಾಗಿ ಭೌತವಿಜ್ಞಾನದ ಪ್ರಯೋಗಗಳನ್ನು ಹೊರಾಂಗಣದಲ್ಲಿ ನೋಡಿ ಕಲಿ, ಮಾಡಿ ತಿಳಿ ಎನ್ನುವ ಉದ್ದೇಶಕ್ಕೆ ಒತ್ತು ನೀಡುವ ಯೋಜನೆ ಇದಾಗಿದೆ. ಭೌತವಿಜ್ಞಾನದ ಸುಮಾರು ೩೦ ಪ್ರಯೋಗಗಳಿಗೆ ಸಂಬAಧಿತ ಸಲಕರಣೆಗಳನ್ನು ಸುಮಾರು ರೂ.೨೫ ಲಕ್ಷಗಳ ವೆಚ್ಚದ ಉಪಕರಣಗಳನ್ನು ವಿಜ್ಞಾನವನದಲ್ಲಿ ಅಳವಡಿಸಲಾಗಿದೆ. ಪ್ರತಿಯೊಂದೂ ಅಪರೂಪ ಮತ್ತು ಕುತೂಹಲಭರಿತವಾಗಿದೆ. ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಸೃಷ್ಠಿಸುವ ಉದ್ದೇಶದ ಯೋಜನೆ ಇದಾಗಿದೆ ಎಂದು ತಿಳಿಸಿದರು.
ಕೀರ್ತಿಶೇಷ ಕೋಟ ಲಕ್ಷ್ಮೀ ನಾರಾಯಣ ಕಾರಂತ ಅವರ ಮಹತ್ವಾಕಾಂಕ್ಷೆಯಿAದ ಹುಟ್ಟಿಕೊಂಡು ದಿ.ಮಾದಪ್ಪ ಉರಾಳ ಅವರ ಉದಾರತೆಯಿಂದ ಕಟ್ಟಲ್ಪಟ್ಟ ವಿವೇಕ ವಿದ್ಯಾಸಂಸ್ಥೆಗಳ ಹೆಚ್ಚುಗಾರಿಕೆಗೆ ಮತ್ತೊಂದು ಅಪರೂಪದ ಯೋಜನೆ ಇದು. ಕ್ಯಾಪ್ಸ್ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮುಂಡ್ಕೂರು, ಅವರ ಅತ್ಯಪೂರ್ವ ಕಲ್ಪನೆ ಈ ವಿಜ್ಞಾನವನ. ಈ ಶೈಕ್ಷಣಿಕ ವರ್ಷದಲ್ಲಿ ಮೂರು ವಿಜ್ಞಾನವನಗಳ ನಿರ್ಮಾಣ ಕ್ಯಾಪ್ಸ್ ಫೌಂಡೇಶನ್‌ನಿAದ ನೆರವೇರುತ್ತಿದ್ದು, ನಮ್ಮ ವಿದ್ಯಾಸಂಸ್ಥೆಯ ವಿಜ್ಞಾನವನ ಎರಡನೆಯ ವಿಜ್ಞಾನವನವಾಗಿರುತ್ತದೆ ಎಂದು ಅವರು ತಿಳಿಸಿದರು.

ಉದ್ಘಾಟನೆ :
ಅಂದು ಬೆಳಿಗ್ಗೆ ವಿವೇಕ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆಯುವ ಸಮಾರಂಭವನ್ನು ವಿಶ್ರಾಂತ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ರಾವ್ ಉದ್ಘಾಟಿಸುವರು. ಕೋಟ ವಿದ್ಯಾ ಸಂಘದ ಅಧ್ಯಕ್ಷ ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸುವರು.
ಮನೋರಮಾ ರಾವ್, ಕರ್ಣಾಟಕ ಬ್ಯಾಂಕ್‌ನ ಸಿ.ಇ.ಓ ಮಹಾಬಲೇಶ್ವರ ಎಂ.ಎಸ್, ಕೋಟ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್, ಕೋಟ ವಿದ್ಯಾ ಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ, ಕಟೀಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೃಷ್ಣ ಕಾಂಚನ್, ನಿವೃತ್ತ ಉಪನ್ಯಾಸಕ ಎ.ನೀರೇಂದ್ರ, ಡಿಡಿಪಿಯು ಮಾರುತಿ, ಡಿಡಿಪಿಐ ಗೋವಿಂದ ಮಡಿವಾಳ, ಬಿ.ಇ.ಓ ಬಿ.ಟಿ.ನಾಯ್ಕ, ವಿವೇಕ ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ, ಬೆಂಗಳೂರಿನ ಕ್ಯಾಪ್ಸ್ ಫೌಂಡೇಶನ್‌ನ ಸಂಸ್ಥಾಪಕ ಚಂದ್ರಶೇಖರ ಹೆಗ್ಡೆ ಮುಂಡೂರು, ಸಿ.ಇ.ಓ ಡಾ.ಕುಮಾರ್ ಜಿ.ಎಸ್, ವಿಜ್ಞಾನವನದ ಉಸ್ತುವಾರಿ ಅಮನ್ ಶೆಟ್ಟಿ, ವಿವೇಕ ವಿದ್ಯಾ ಸಂಘದ ಕೆ.ಜಗದೀಶ ಹೊಳ್ಳ ವೆಂಕಟೇಶ ಉಡುಪ, ಭಾಸ್ಕರ ಆಚಾರ್ಯ, ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ರಮಾನಂದ ಭಟ್ ಉಪಸ್ಥಿತರಿರುವರು ಎಂದರು.
ಗೋಷ್ಟಿಯಲ್ಲಿ ಮಂಜುನಾಥ ಉಪಾಧ್ಯ, ಜಗದೀಶ ನಾವುಡ, ಚಂದ್ರಶೇಖರ ಶೆಟ್ಟಿ ಮುಂಡ್ಕೂರು, ಜಗದೀಶ ಹೊಳ್ಳ, ನರೇಂದ್ರ ಕುಮಾರ್ ಕೋಟ, ವೆಂಕಟೇಶ ಭಟ್ ಇದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!