ನಾವೆಲ್ಲರೂ ಭಗವಂತನ ಕೃಪಾ ಸಾಲದಲ್ಲಿದ್ದೇವೆ- ಡಾ. ವಿವೇಕ್ ಉಡುಪ

ಭಗವಂತನ ಹೆಸರಿನಲ್ಲಿ ಜನರ ಸೇವೆ ಮಾಡುವುದರಿಂದ ಸಿಗುವ ಸಂತೋಷ ಕೋಟಿ ಕೊಟ್ಟರೂ ಸಿಗದು. ಭಗವಂತನ ಕೃಪೆಯ ಸಾಲ ದಲ್ಲಿರುವ ನಾವು ಅದನ್ನು ತೀರಿಸಲು ತ್ಯಾಗ, ಸೇವೆ, ಸಾಧನೆ ಹಾಗೂ ಇನ್ನಿತರ ಸತ್ಕಾರ್ಯ ಗಳಲ್ಲಿ ತೊಡಗಿ ಕೊಳ್ಳ ಬೇಕಾಗಿದೆ. ಇದೇ ಜೀವನಕ್ಕೆ ಸಾರ್ಥಕ್ಯ ವನ್ನು ತಂದು ಕೊಡುತ್ತದೆ ಎಂದು ಕೋಟ ಮೂಡುಗಿಳಿಯಾರಿನ ಸರ್ವ ಕ್ಷೇಮ ಆಸ್ಪತ್ರೆ ಹಾಗೂ ಸಂಶೋಧನಾ ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕರಾದ ಡಾ. ವಿವೇಕ್ ಉಡುಪ ತಿಳಿಸಿದರು.  

ಡಿವೈನ್ ಪಾರ್ಕಿನ ಮಧ್ಯ ವಲಯದ ವಿವೇಕ ಜಾಗೃತ ಬಳಗಗಳು ಕಿದಿಯೂರು ಹೋಟೆಲ್ ನ ಮಾಧವ ಕೃಷ್ಣ ಹಾಲಿನಲ್ಲಿ ಶನಿವಾರ ಏರ್ಪಡಿಸಿದ್ದ ‘ಯೋಗಕಹಳೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ಕಾರರಾಗಿ ಅವರು ಮಾತನಾಡಿದರು. 

ಯಾವಾಗ ನಾವು ಪ್ರಕೃತಿಗೆ ವಿರುದ್ದವಾಗಿ ಹೋಗುತ್ತೇವೋ ಆಗ ಪ್ರಕೃತಿ ನಮಗೆ ಪಾಠ ಕಲಿಸುತ್ತದೆ . ಇಂದೀಗ ನಾವು ಕಾಣುತ್ತಿರುವ ಪ್ರಕೃತಿ ವೈಪರಿತ್ಯಗಳು ನಾವೇ ಮಾಡಿದ ಪ್ರಕೃತಿ ನಾಶದ ಫಲ. ಅದಕ್ಕಾಗಿ ಡಿವೈನ್ ಪಾರ್ಕ್ ನ ಸರ್ವ ಕ್ಷೇಮ ಆಸ್ಪತ್ರೆ ಹಾಗೂ ಸಂಶೋಧನಾ ಪ್ರತಿಷ್ಠಾನದಲ್ಲಿ 1,25,000 ಔಷಧೀಯ ಸಸ್ಯಗಳನ್ನು ಬೆಳೆಸಿದ್ದೇವೆ. ಪ್ರಕೃತಿಯೇ ದೇವರು ಎಂಬುದನ್ನು ಎಲ್ಲರೂ ಮನಗಾಣ ಬೇಕು. ಪ್ರಕೃತಿಯನ್ನು ಪೂಜಿಸಿ. ಏಕೆಂದರೆ ಪ್ರಕೃತಿ ಯ ಮೂಲಕ ಭಗವಂತ ವ್ಯಕ್ತವಾಗುತ್ತಿದ್ದಾನೆ ಎಂದು ಅವರು ತಿಳಿಸಿದರು. ಮಹೇಶ್ ವಕ್ವಾಡಿ ಯವರು ಕಾರ್ಯಕ್ರಮ ನಿರೂಪಣೆ ಮಾಡಿದರು.

 
 
 
 
 
 
 
 
 

Leave a Reply