Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಅನಾರೋಗ್ಯ ಪೀಡಿತರಾಗಿ ಆರ್ಥಿಕ ಸಮಸ್ಯೆಗೊಳಗಾಗಿರವ ದಂಪತಿಗಳ ಮನೆಗೆ ಸಮಾಜ ಸೇವಕ ವಿಶು ಶೆಟ್ಟಿ ಭೇಟಿ

ಉಡುಪಿ ಜಿಲ್ಲೆ ಕಾಪು ತಾಲೂಕು ಶಿರ್ವಮಂಚಕಲ್ ಕಾಡಿಕಂಬ್ಲದ ಜಿಎಸ್ಬಿ ಸಮುದಾಯದ ಅರ್ಚಕ ರಮಾನಾಥ ಜೋಯಿಸ ಮತ್ತು ಅವರ ಪತ್ನಿ ಮಾಲತಿ ಜೋಯಿಸ ಅನಾರೋಗ್ಯ ಪೀಡಿತರಾಗಿ ಆರ್ಥಿಕ ಸಮಸ್ಯೆಗೊಳಗಾಗಿರವುದನ್ನು ತಿಳಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಸರಕಾರಿ ನಿವೃತ್ತ ಅಧಿಕಾರಿ ಶ್ರೀನಿವಾಸ ಶೆಟ್ಟಿ ತೋನ್ಸೆಯವರೊಂದಿಗೆ ದಂಪತಿಗಳ ಮನೆಗೆ ಹೋಗಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು. ಆರ್ಥಿಕವಾಗಿ ಚಿಕಿತ್ಸಾ, ದೈನಂದಿನ ವೆಚ್ಚ ಭರಿಸಲಾಗದ ಅನಾರೋಗ್ಯ ಪೀಡಿತ ದಂಪತಿಗಳ ಏಕೈಕ ಪುತ್ರಿ ಪಿಯುಸಿ ವಿದ್ಯಾರ್ಥಿನಿ ಸಾಧನಾ ಜೋಯಿಸರಿಗೆ 10,000 ರೂ. ಕೊಡುಗೆಯಾಗಿ ನೀಡಿದರು. ಶಿರ್ವದ ಸಮಾಜ ಸೇವಕ ಅನಂತ್ರಾಯ ಶೆಣ್ಯೆ, ಉದಯವಾಣಿ ಪತ್ರಿಕಾ ವಿತರಕ ಅನಂತ ಶೆಣೈ, ಶ್ರೀನಿವಾಸ ಕಾಮತ್ ಶಿರ್ವ, ನರೇಂದ್ರ ಪ್ರಭು ಸೂಡ ಉಪಸ್ಥಿತರಿದ್ದರು. ಬಡ ಅರ್ಚಕ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವವರು ಶಿರ್ವ ಕೆನರಾ ಬ್ಯಾಂಕಿನ ಉಳಿತಾಯ ಖಾತೆ 2409101008492, IFSC code CNRB0010145ಕ್ಕೆ ಜಮೆ ಮಾಡಬಹುದು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!