ಬೆಂಗಳೂರು: ಕರ್ನಾಟಕ ವಿಪ್ರ ಫೋಟೋಗ್ರಾಫರ್ಸ್  ಮತ್ತು ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ (ರಿ) ಉದ್ಘಾಟನೆ  

ವಿಶ್ವ ಛಾಯಾಗ್ರಾಹಕರ ದಿನ, ಸಾಧನೆ ಮಾಡಿದ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯ ಕ್ರಮವನ್ನು ಬಸವನಗುಡಿಯ ಉದಯ ಭಾನು ಕಲಾ ಸಂಘ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾಗಿತ್ತು . 
ದೀಪ ಬೆಳಗಿಸಿ ಕಾರ್ಯಕ್ರಮವನ್ನು ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಉದ್ಘಾಟಿಸಿದರು. ಚಿಕ್ಕಪೇಟೆ ಶಾಸಕ ಉದಯಗರುಡಾಚಾರ್, ಪಂಡಿತರಾದ ಸತ್ಯಧ್ಯಾನಚಾರ್ಯ ಕಟ್ಟಿರವರು,   ಅಖಿಲಾ ಕರ್ನಾಟಕ ಮಹಾಸಭಾ ಉಪಾಧ್ಯಕ್ಷರಾದ ಲಕ್ಷ್ಮೀಕಾಂತ್, ಹಿರಿಯ ಪತ್ರಕರ್ತ ವೆಂಕಟ ನಾರಾಯಣ್  ಕೆ.ಎಸ್.ವಿ.ಪಿ.ಸಂಘದ ಅಧ್ಯಕ್ಷ ಬಿ.ಕೆ.ರಮೇಶ್ ರವರು ಕ್ಯಾಮರಗಳನ್ನು ಚಾಲನೆ ಮಾಡುವ ಮೂಲಕ ಸಂಘಟನೆಯನ್ನು ಲೋಕಾರ್ಪಣೆ ಗೊಳಿಸಿದರು. 

ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಮಾತನಾಡಿ ಸಂಘಟನೆ ಇದ್ದಾಗ ಸಮಾಜ ಅಭಿವೃದ್ದಿ ಸಾಧ್ಯ. ಧಾರ್ಮಿಕ , ಸಂಸ್ಕೃತಿ, ಸಂಪ್ರಾದಯಗಳನ್ನು ಮರೆಯಬಾರದು . ಯಾವುದೇ ವೃತ್ತಿ ಮೇಲು ಕೀಳು ಇಲ್ಲ . ಶ್ರದ್ದೆ ಭಕ್ತಿ ಇಂದ ಶ್ರೀಕೃಷ್ಣನ ನೆನದು ಕಾರ್ಯ ನಿರ್ವಹಿಸಿ ಯಶ್ವಸಿ ಫಲ ಸಿಗುತ್ತದೆ ಎಂದು ಆಶೀರ್ವಚನ  ನೀಡಿದರು 

ಶಾಸಕ ಉದಯಗರುಡಾಚಾರ್  ಮಾತನಾಡಿ ಬ್ರಾಹ್ಮಣ ಸಮುದಾಯದವರು ವಿಡಿಯೊ ಮತ್ತು ಪೋಟೋ ಉದ್ಯಮದಲ್ಲಿ ತೊಡಗಿಸಿಕೊಂಡು ವಿಡಿಯೊ, ಪೋಟೋ ಕ್ಷೇತ್ರದಲ್ಲಿ ಹೆಸರು ಗಳಿಸಿ ದ್ದಾರೆ. ರಾಜಕಾರಣಿಗಳ ಯಾವುದೇ ಕಾರ್ಯಕ್ರಮ ಪೋಟೋ ಬಹಳ ಮುಖ್ಯ. ನಾವು ಮಾಡಿದ ಸಾಧನೆ ಪೋಟೋ ಮಾತನಾಡುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ಸಾಧನೆ ಮಾಡಿದ ಪೋಟೋಗ್ರಾಫರ್ ಗಳನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿಪ್ರ  ಪೋಟೋಗ್ರಾಫರ್ಸ್ ಸಂಘದ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು. ಬಳಿಕ ಛಾಯಾಗ್ರಹಣ ಕ್ಷೆತ್ರದಲ್ಲಿ ಸಾಧನೆಗೈದ ಛಾಯಾಗ್ರಾಹಕರಿಗೆ ಸನ್ಮಾನಿಸಿದರು.
 
 
 
 
 
 
 
 
 
 
 

Leave a Reply