ಕೀರ್ತಿಶೇಷ ಶ್ರೀ ವಿದ್ಯಾರತ್ನ ತೀರ್ಥಶ್ರೀಪಾದರು ಒಂದು ಸ್ಮರಣೆ

ಜಗದ್ಗುರು ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿರುವ ಶ್ರೀ ಕೃಷ್ಣಾಪುರ ಮಠದ ಶ್ರೀ ಜನಾರ್ದನ ತೀರ್ಥ ಯತಿ ಪರಂಪರೆಯ 33 ನೇ ಯತಿಗಳಾಗಿದ್ದವರು .

ಜನನ :ಶಾಲಿವಾಹನ ಶಕವರ್ಷ 1842 ವೈಶಾಖ ರೌದ್ರಿ ಸಂವರತ್ಸರ ಬಹುಳ ಅಮಾವಾಸ್ಯೆ

ತಂದೆ : ಶ್ರೀ ಗಣಪಯ್ಯ ತಂತ್ರಿ
ತಾಯಿ : ಕಮಲಮ್ಮ

ಪೂರ್ವಾಶ್ರಮದ ಹೆಸರು : ಕೃಷ್ಣಮೂರ್ತಿ .

ತುರೀಯಾಶ್ರಮ ಸ್ವೀಕಾರ : ಶ್ರೀ ಪುತ್ತಿಗೆ ಮಠಾಧೀಶ ಶತಾಯುಷಿ ಶ್ರೀ ಸುಧೀಂದ್ರ ತೀರ್ಥರಿಂದ 30/3/1935 ರಲ್ಲಿ

ವೇದ ವೇದಾಂತ ತರ್ಕ ನ್ಯಾಯ ವ್ಯಾಕರಣಾದಿ ಸಕಲ ಶಾಸ್ತ್ರ ಪಾರಂಗತರು .ಕನ್ನಡ ಹಿಂದಿ ಇಂಗ್ಲೀಷ್ ಭಾಷಾ ಪ್ರವೀಣರು

ಶ್ರೀ ಸುಧೀಂದ್ರತೀರ್ಥ ಶ್ರೀಪಾದರಿಂದ ಶಾಸ್ತ್ರಾಧ್ಯಯನ
ಕಾಶಿಯಲ್ಲಿ ಎರಡು ವರ್ಷ ತರ್ಕ ವೇದಾಂತಾಧ್ಯಯನ

ಸನ್ಯಾಸ ಪೂರ್ವದಲ್ಲೇ ದೇಶಾದ್ಯಂತ ನೂರಾರು ತೀರ್ಥ ಕ್ಷೇತ್ರಗಳ ಸಂದರ್ಶನ

ಅಪೂರ್ವ ವಿದ್ಯಾಭಿಮಾನಿಗಳು .

ಮೊದಲ ಶ್ರೀ ಕೃಷ್ಣಪೂಜಾ ಪರ್ಯಾಯ 1942-44.
ಎರಡನೇ ಪರ್ಯಾಯ 1958-60

ಪರ್ಯಾಯಾವಧಿಯಲ್ಲಿ ಶ್ರೀ ಕೃಷ್ಣ ಪರ್ಯಾಯ ಪ್ರಕಾಶಿನಿ ಮಾಸಪತ್ರಿಕೆಯನ್ನು ನಡೆಸುತ್ತಿದ್ದರು .
ಪ್ರಥಮ‌ಪರ್ಯಾಯಕಾಲದಲ್ಲಿ ದೇಶದಲ್ಲಿ ಯುದ್ಧದ ಕಾರಣದಿಂದ ಕ್ಷೋಭೆ ಇದ್ದರೂ ಅತ್ಯಂತ ಯಶಸ್ವಿಯಾಗಿ ನಡೆಸಿದ್ದರು .
ಉಡುಪಿ ಶ್ರೀ ಕೃಷ್ಣಾಪುರ ಮಠದ ಮುಖ ಮಂಟಪ ನಿರ್ಮಾಣ

ಉಡುಪಿ ಪೆರಂಪಳ್ಳಿ ಸಮೀಪ ಮಠದ ಶಾಖೆ ನಿರ್ಮಾಣಮಾಡಿದರು .
ಗುಣ, ಜ್ಞಾನ ಪಕ್ಷಪಾತಿಯಾಗಿದ್ದರು . ದಕ್ಷ ಆಡಳಿತಗಾರರೂ ಹೌದು .

1971 ಚೈತ್ರ ಬಹುಳ ಪಂಚಮೀ ತಿಥಿಯಂದು 51 ನೇ ವಯಸ್ಸಿನಲ್ಲಿ ವೃಂದಾವನಸ್ಥರಾದರು .

ವೃಂದಾವನ ಸ್ಥಳ : ಉಡುಪಿ ಮಣಿಪಾಲಕ್ಕೆ ಸಮೀಪದ ಸಗ್ರಿಯಲ್ಲಿರುವ ರಾಮಕಟ್ಟೆ ಮಠ , ( ಶ್ರೀ ಮಠದ ಶಾಖೆ
ಹರಿಃ ಓಂ ತತ್ಸತ್ 
 ಜಿ ವಾಸುದೇವ ಭಟ್ ಪೆರಂಪಳ್ಳಿ

 
 
 
 
 
 
 
 
 
 
 

Leave a Reply