ವಿಶ್ವದ ಪ್ರಸಿದ್ಧ ಕಾಫಿ ಸಂಸ್ಥೆ ಸ್ಟಾರ್‌ಬಕ್ಸ್‌ನ ಸಹ ಸಂಸ್ಥಾಪಕ ಜೆವ್ ಸೀಗಲ್ ವಿದ್ಯಾರ್ಥಿ ಭವನಕ್ಕೆ ಭೇಟಿ!

ವಿಶ್ವದ ಅತಿ ದೊಡ್ಡ ಮತ್ತು ಪ್ರಸಿದ್ಧ ಕಾಫಿ ಸಂಸ್ಥೆಯಾದ ಸ್ಟಾರ್‌ಬಕ್ಸ್‌ನ ಸಹ ಸಂಸ್ಥಾಪಕ ಜೆವ್ ಸೀಗಲ್ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ, ಪ್ರಸಿದ್ಧ ಮಸಾಲೆ ದೋಸೆ ತಿಂದು, ಫಿಲ್ಟರ್ ಕಾಫಿಯನ್ನು ಸವಿಸಿದ್ದಾರೆ.

ರಾಜ್ಯ ರಾಜಧಾನಿಯಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (Global Investors Meet 2022) ದಲ್ಲಿ ಭಾಗವಹಿಸುವ ಸಲುವಾಗಿ ಜೆವ್ ಸೀಗಲ್ ಬೆಂಗಳೂರಿಗೆ ಬಂದಿದ್ದರು. ಇದೆ ವೇಳೆ ನಗರದ ಪ್ರತಿಷ್ಠಿತ
ವಿದ್ಯಾರ್ಥಿ ಭವನಕ್ಕೆ ತೆರಳಿದ್ದಾರೆ. ಅಲ್ಲಿನ ಪ್ರಸಿದ್ಧ ಆಹಾರದ ರುಚಿ ನೋಡಿದ್ದಾರೆ. ಅದರ ಫೋಟೋಗಳನ್ನು ಸ್ವತಃ ವಿದ್ಯಾರ್ಥಿ ಭವನ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಇದಲ್ಲದೇ ಹೊರಡುವ ವೇಳೆ ಹೋಟೆಲ್‌ನ ಅತಿಥಿ ಪುಸ್ತಕದಲ್ಲಿ ತಮ್ಮ ಮೆಚ್ಚುಗೆಯ ನುಡಿಗಳನ್ನು ಈ ರೀತಿ ಬರೆದಿದ್ದಾರೆ.

‘ಸ್ನೇಹಿತರೇ, ನಿಮ್ಮಲ್ಲಿನ ಪ್ರಸಿದ್ಧ ಆಹಾರವಾದ ಮಸಾಲೆ ದೋಸೆ ಮತ್ತು ಕಾಫಿಯನ್ನು ಸೇವಿಸಿ ನನಗೆ ಬಹಳ ಸಂತೋಷವಾಯಿತು ನಿಮ್ಮ ಅತಿಥ್ಯ, ನಿಮ್ಮ ಗೌರವ ನನಗೆ ಬಹಳ ಸಂತೋಷವನ್ನು ನೀಡಿದೆ. ಇಲ್ಲಿ ಪಡೆದ ಅದ್ಭುತ ಅನುಭವದೊಂದಿಗೆ
ಮರಳುತ್ತಿದ್ದೇನೆ, ಧನ್ಯವಾದಗಳು’ ಎಂದು ಬರೆದಿದ್ದಾರೆ, ಜತೆಗೆ 3 ಸ್ಟಾರ್‌ಗಳನ್ನು ಬರೆದು ತಮ್ಮ ಸಹಿಯನ್ನು ಹಾಕಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply