Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಏಕಾಹ ಭಜನೆ

ಬೈಂದೂರು: ಕೆರ್ಗಾಲು ಗ್ರಾಮದ, ನಾಯ್ಕನಕಟ್ಟೆ ಜಿಎಸ್’ಬಿ ಸಮಾದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಏಕಾಹ ಭಜನೆ ಆದಿತ್ಯವಾರ ಮುಂಜಾನೆಯಿಂದ ನಡೆಯಿತು. ಅರ್ಚಕ ಬಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಹತ್ತು ಸಮಸ್ತರ ಪರವಾಗಿ ಮಾಜಿ ಅಧ್ಯಕ್ಷ ದಾಮೋದರ ಪ್ರಭು ದೀಪ ಸ್ಥಾಪನೆ ಮಾಡಿದರು.
ನಂತರ ವಿವಿಧ ಭಜನಾ ತಂಡದವರಿಂದ ನಿರಂತರವಾಗಿ ಭಜನೆಗಳು ನಡೆದು ಮಂಗಳವಾರ ಮುಂಜಾನೆ ಸಂಪನ್ನಗೊಂಡಿತು.ಮಾಸ್ಟರ್ ಆಯುಷ್ ಆನಂದ ಭಟ್ ಉಪ್ಪುಂದ,ಶ್ರೀ ರಾಮ ಭಜನಾ ಮಂಡಳಿ ಕೋಡಂಗೆ – ಪರ್ಕಳ,ಶ್ರೀ ವೀರವಿಠ್ಠಲ ಮಹಿಳಾ ಭಜನಾ ಮಂಡಳಿ ಗಂಗೊಳ್ಳಿ,ಪೇಟೆ ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿ ಕುಂದಾಪುರ, ಶ್ರೀ ವೆಂಕಟರಮಣ ಬಾಲಭಜನಾ ಮಂಡಳಿ ನಾಯ್ಕನಕಟ್ಟೆ, ಶ್ರೀ ವೆಂಕಟರಮಣ ಭಜನಾ ಮಂಡಳಿ ಉಪ್ಪುಂದ, ಶ್ರೀ ಸುಧೀಂದ್ರ ತೀರ್ಥ ಭಜನಾ ಮಂಡಳಿ ತೆಕ್ಕಟ್ಟೆ,ಶ್ರೀ ವೆಂಕಟರಮಣ ಭಜನಾ ಮಂಡಳಿ ನಾಯ್ಕನಕಟ್ಟೆ ಮತ್ತು 
ಸ್ಥಳೀಯ ತಂಡಗಳಿಂದ ನಡೆದ ಭಜನೆ ಭಕ್ತಜನರ ಮನಸೂರೆಗೊಂಡಿತು.ಸೋಮವಾರ ಭಜನೆ ಮಂಗಲ ಹಾಗೂ ಸಮಾರಾಧನೆ ಸಂಜೆ ಪಲ್ಲಕ್ಕಿ ಉತ್ಸವ, ನಗರ ಭಜನೆ,ಕಟ್ಟೆ ಪೂಜೆ,ಉಭಯ ದೇಗುಲಗಳಲ್ಲಿ ಪೂಜೆ, ಪ್ರಸಾದ  ವಿತರಣೆ ಜರಗಿತು.
ಶಶಿಧರ ಶೆಣೈ ಅವರ ದೀಪಾಲಂಕಾರ ಹಾಗೂ ಶ್ರೀಶ ಭಟ್ ಮತ್ತು ಗುರು ಪ್ರಸಾದ ನಾಯಕ್ ಹಾಗೂ ಗೆಳೆಯರ ಬಳಗ ಇವರು ದೇವಾಲಯ ಮತ್ತು ಭಜನಾ ಮಂಟಪಕ್ಕೆ ಮಾಡಿದ ವಿಶೇಷವಾದ ಹೂವಿನ ಅಲಂಕಾರ ಆಕರ್ಷಣೀಯವಾಗಿತ್ತು.ಟ್ರಸ್ಟ್ ಅಧ್ಯಕ್ಷ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್, ಕಾರ್ಯದರ್ಶಿ ರಮೇಶ್ ಪೈ, ಸದಸ್ಯರು ಹತ್ತು ಸಮಸ್ತರು ಮತ್ತು ಸೇವಾದಾರರಾದ ದಿ ಶಂಕರನಾರಾಯಣ ಪ್ರಭು ಮತ್ತು ಸಹೋದರರ ಮಕ್ಕಳು ಮತ್ತು ಬಂಧುಗಳು ಉಪಸ್ಥಿತರಿದ್ದು  ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!