ನಿವೃತ್ತ ಮಿಲಿಟರಿ ಟೈಲರ್ ಕೆ.ವೇದವ್ಯಾಸ ಭಟ್ ನಿಧನ

ಕರಂಬಳ್ಳಿ ವೆಂಕಟರಮಣ ಲೇ ಔಟ್ ನಿವಾಸಿ ಮೂಲತಃ ಕಟಪಾಡಿ ಯವರಾದ ನಿವೃತ್ತ ಮಿಲಿಟರಿ ಟೈಲರ್ ಕೆ.ವೇದವ್ಯಾಸ ಭಟ್(81)ಸೆ.23 ರಂದು ನಿಧನ ಹೊಂದಿದರು.ಇವರು ಪತ್ನಿ ಹಾಗೂ ಪುತ್ರಿ ಯವರನ್ನು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.ಇವರು ಚೆನ್ನೈಯ ಆವಾಡಿ ಎಂಬಲ್ಲಿ ಕೇಂದ್ರ ಸರಕಾರದ ಅರ್ಬನ್ ಕ್ಲೋತಿಂಗ್ ಪ್ಯಾಕ್ಟರಿಯಲ್ಲಿ ಸುಮಾರು 39 ವರ್ಷಗಳ ಕಾಲ ಮಿಲಿಟರಿ ಸೈನಿಕರಿಗೆ ಬಟ್ಟೆಯನ್ನು ಹೊಲಿದು ಕೊಡುತ್ತಿರುವ ಕೆಲಸವನ್ನು ಮಾಡಿಕೊಳ್ಳುತ್ತಿದ್ದರು.ಅಲ್ಲದೆ ಬಿಡುವಿನ ಸಮಯದಲ್ಲಿ ಬಡಜನರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ಕೊಡುತ್ತಿದ್ದು ಹಾಗೂ ಬಡ ವಿದ್ಯಾರ್ಥಿ ಯವರಿಗೆ ತನಗೆ ಬಂದ ಸಂಬಳದಲ್ಲಿ ಶಿಕ್ಷಣಕ್ಕಾಗಿ ಸಹಾಯವನ್ನು ನೀಡುತ್ತಿದ್ದರು.ಹಾಗೂ ತನ್ನ ಸಹಪಾಠಿ ಗಳು ತಮ್ಮ ದೇಹದಾನ ವನ್ನು ಮಾಡಿ ಕೊಂಡಿದ್ದನ್ನು ಕಂಡು ಪ್ರೇರಿತರಾಗಿ ತಾನು ಕೂಡಾ ದೇಹದಾನ ಮಾಡಿ ಕೊಳ್ಳ ಬೇಕೆಂಬ ಇಚ್ಚೆಯನ್ನು ಕರಂಬಳ್ಳಿ ನೆರೆಮನೆಯ ನಿವಾಸಿ ನಮೋಫ್ರೆಂಡ್ಸ್ ಡೊಡ್ಡಣಗುಡ್ಡೆ ಇದರ ಅಧ್ಯಕ್ಷ ರಾದ ವಿನಯ್ ಕುಮಾರ್ ಪೂಜಾರಿಯವ ರೊಂದಿಗೆ ನಾಲ್ಕು ವರುಷದ ಹಿಂದೆ ಅನಾರೋಗ್ಯ ದಿಂದ ಬಳಲುತ್ತಿದ್ದುದರಿಂದ ದೇಹದಾನದ ಬಗ್ಗೆ ಹೇಳಿ ಕೊಂಡಿದ್ದರು.ಆ ಪ್ರಯಕ್ತ ವಿನಯ್ ಕುಮಾರ್ ಪೂಜಾರಿಯವರು ಇವರ ಸಹಿ ಪಡೆದು ಕೊಂಡು ತಾನೇ ಸ್ವತಃ ಮಣಿಪಾಲದ K.M.C.ಆಸ್ಪತ್ರೆಯಲ್ಲಿ ತೆರಳಿ ನೊಂದಾಯಿಸಿ ಕೊಂಡು ಬಂದಿದ್ದರು ಹಾಗೂ ಇಂತಹ ಅನಾರೋಗ್ಯ ಸಮಯದಲ್ಲಿ ಮನೆಯಲ್ಲಿ ವಯಸ್ಸಾದ ಪತ್ನಿ ಮಾತ್ರ ಇದ್ದುದರಿಂದ ಅವರನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಬರಲು ಸಹಕರಿಸಿದ್ದರು.ಇದೇ ತಾರೀಕು 23 ಸೆಪ್ಟಂಬರ್ ರಂದು ಮುಂಜಾನೆ 2.30 ಗಂಟೆಗೆ ಸರಿಯಾಗಿ ವೇದವ್ಯಾಸ ಭಟ್ ರವರು ಇಹಲೋಕ ತ್ಯಜಿಸಿದರು. ಪುತ್ರಿ ಬೆಂಗಳೂರಿನಿಂದ ಬಂದ ನಂತರ ಮೃತ ದೇಹವನ್ನು ಪತ್ನಿ ಹಾಗೂ ಪುತ್ರಿಯ ಮುಖಾಂತರ ದಾನವಾಗಿ ಮಣಿಪಾಲದ K.M.C.ಆಸ್ಪತ್ರೆಗೆ ನೀಡಲಾಯಿತು.

 
 
 
 
 
 
 
 
 
 
 

Leave a Reply