ವಾಸಂತಿ ಅಂಬಲಪಾಡಿಯವರ “ವಸುಮಿತ್ರೆ ಕೇಳು” ಅಬಾಬಿ ಸಂಕಲನ ಬಿಡುಗಡೆ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಜಿಂಗಳೂರು ಮತ್ತು ಉಡುಪಿ ಜಿಲ್ಲಾ ತಾಲೂಕು ಘಟಕ ಹಾಗೂ ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌ ಸಹಯೋಗದಲ್ಲಿ ವಾಸಂತಿ ಅಂಬಲಪಾಡಿಯವರ “ವಸುಮಿತ್ರೆ ಕೇಳು
ಅಬಾಬಿ ಸಂಕಲನ ಬಿಡುಗಡೆ. ಬಹುಮಾನ ವಿತರಣೆ ಮತ್ತು ಯುವ ಕಥಾಗೊಷ್ಠಿ ತಾ. 23-04-2022ನೇ ಶನಿವಾರ ಮಧ್ಯಾಹ್ನ ಗಂಟೆ 3.00ರಿಂದ ಉಡುಪಿ ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌ ನಡೆಯಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್‌ ಹೆಚ್‌.ಪಿ. ವಹಿಸಲಿದ್ದಾರೆ. ಅತಿಥಿಗಳಾಗಿ ಪೂರ್ಣಿಮಾ ಸುರೇಶ್‌, ಸಾಹಿತಿ, ನಟಿ, ಸಂಘಟಕಿ, ನಿರೂಪಕಿ
ಶ್ರೀ ರಾಮಕೃಷ್ಣ ಶೀರೂರು, ರಾಜ್ಯ ಸಂಜಾಲಕರು, ಉಡುಪಿ ಜಿಲ್ಲಾ ಉಸ್ತುವಾರಿ ಕೇಕಸಾವೇ. ಹಾಗು ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌ ಶಾಖಾ ಮುಖ್ಯಸ್ಥರಾದ ಹಫೀಜ್‌ ರೆಹಮಾನ್‌ ಅಡ್ಯಾರು ಭಾಗವಹಿಸಲಿದ್ದಾರೆ.

ಕೃತಿ ಪರಿಚಯವನ್ನು ಲೇಖಕಿ ಸುಮಾ ಕಿರಣ್‌ ನಡೆಸಲಿದ್ದಾರೆ. ಕೃತಿ ಬಿಡುಗಡೆಯನ್ನು ಉದ್ಯಮಿ ಗೋಪಾಲ್‌ ಬಂಗೇರ ಹಾಗು ಸುಲೋಚನಾ ಗೋಪಾಲ್‌ ಬಂಗೇರ ನಡೆಸಲಿದ್ದಾರೆ.

ಯುವ ಕಥಾಗೋಷ್ಠಿಯಲ್ಲಿ ಭಾಗವಹಿಸುವ ಯುವ ಕಥೆದಾರರು:
ಮಂಜುಳಾ ತೆಕ್ಕಟ್ಟೆ, ಸುಷ್ಮಾ ಎ.ಎಸ್‌. , ವೈಷ್ಣವಿ ಪುರಾಣಿಕ್‌, ಜಯಲಕ್ಷ್ಮೀ, ರಾಧಿಕಾ ನಾರಾಯಣ, ಶಾಂಭವಿ ಕಾ.ಶ್ರೀ ಕಾಡೂರು, ವಿಜಯಲಕ್ಷ್ಮೀ, ಶ್ರೇಯಾ ಆಚಾರ್ಯ, ಪ್ರಮೀಳಾ ಪೂಜಾರಿ, ಶ್ರಾವ್ಯ ಶೆಟ್ಟಿ, ಸುವಿಧ ಪಂಡಿತ್‌, ಅನುಷಾ ಪಿ. ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ವಾಸಂತಿ ಅಂಬಲಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 

Leave a Reply