ಕೃಷ್ಣಾನುಗ್ರಹ ಮಕ್ಕಳ ಕೇಂದ್ರದಲ್ಲಿ ವನಮಹೊತ್ಸವ

ಉಡುಪಿ :- ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಶ್ರೀ ಕೃಷ್ಣಾನುಗ್ರಹ ಮಕ್ಕಳ ಕೇಂದ್ರ ಮಮತೆಯ ತೊಟ್ಟಿಲಿನಲ್ಲಿ ವನಮಹೋತ್ಸವ ಕಾಯ೯ಕ್ರಮ ಜೂನ್. 23ರಂದು ನಡೆಯಿತು.

ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಮೂಳೆ ರೋಗ ತಜ್ಞ ಹಾಗೂ ಸಂಸ್ಥೆಯ ಅಧ್ಯಕ್ಷ ಡಾI ಉಮೇಶ್ ಪ್ರಭು, ಪರಿಸರವನ್ನು ಚೆನ್ನಾಗಿ ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಗಿಡಗಳನ್ನು ನೆಟ್ಟು ಪಾಲನೆ ಮಾಡಬೇಕು ಈ ಸಂಸ್ಥೆಯಲ್ಲಿ ಈ ರೀತಿಯ ಕಾಯ೯ಕ್ರಮ ಮೊದಲಾಗಿ ನಡೆಯುತ್ತಿದೆ ಎಂದರು.

ಕಸಾಪ ಉಡುಪಿ ತಾಲೂಕು ಗೌರವ ಕಾಯ೯ದಶಿ೯ ಜನಾರ್ದನ್ ಕೊಡವೂರು, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಪ್ರದಾನ ಕಾಯ೯ದಶಿ೯ ರಾಜೇಶ್ ಭಟ್ ಪಣಿಯಾಡಿ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ನಿಕಟ ಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ., ಉಪಾಧ್ಯಕ್ಷ ರಘುಪತಿ ರಾವ್, ಕಸಾಪ ಉಡುಪಿ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸ್ವಾಮಿ ಚಿಕ್ಕ ಮಠ, ಕರವೇ ಉಡುಪಿ ಜಿಲ್ಲಾ ಸಂಚಾಲಕ ಪ್ರಭಾಕರ ಪೂಜಾರಿ, ಕೃಷ್ಣಾನುಗ್ರಹ ಮಕ್ಕಳ ಕೇಂದ್ರದ ಉದಯ್ ಕುಮಾರ್, ಧನ್ವಂತರಿ ನಸಿ೯oಗ್ ಕಾಲೇಜಿನ ವಿದ್ಯಾಥಿ೯ಗಳು ಹಾಗು ರೋಟರಾಕ್ಟ್ ಕ್ಲಬ್ ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ್ ಕೆ.ಎನ್ ಸ್ವಾಗತಿಸಿದರು. ವಿಷ್ಣುಪ್ರಸಾದ್ ಪಾಡಿಗಾರು ನಿರೂಪಿಸಿದರು. ರಾಘವೇಂದ್ರ ಪ್ರಭು, ಕವಾ೯ಲು ವಂದಿಸಿದರು. ಡಾ। ಶ್ರೀಪತಿ ರಾವ್ ಪ್ರಾರ್ಥಿಸಿದರು ಈ ಸಂದಭ೯ದಲ್ಲಿ ಸಂಸ್ಥೆಯ ಆವರಣದಲ್ಲಿ ವಿವಿಧ ಹಣ್ಣಿನ ಸಸ್ಯಗಳನ್ನು ನೆಡಲಾಯಿತು. ಅದೇ ರೀತಿ ಗಿಡಗಳನ್ನು ವಿತರಿಸಲಾಯಿತು.

 
 
 
 
 
 
 
 

Leave a Reply