ವಕ್ವಾಡಿ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿಯವರ ಹುಟ್ಟೂರ ಸನ್ಮಾನ ಸಮಾರ೦ಭದ ಸ೦ಧರ್ಭದಲ್ಲಿ ಪ್ರಸಾದ್ ನೇತ್ರಾಲಯ ವತಿಯಿ೦ದ ನಡೆದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರದಲ್ಲಿ ಗುರುತಿಸಿದ ಫಲಾನುಭವಿಗಳಿಗೆ ಕನ್ನಡಕ ವಿತರಣಾ ಕಾರ್ಯಕ್ರಮವು ವಕ್ವಾಡಿಯ ಫಾರ್ಚೂನ್ ವಿಲ್ಲೇಜ್ ಹೋಟೆಲ್ನ ಕನಕ ಸಭಾ೦ಗಣದಲ್ಲಿ ನಡೆಯಿತು. ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್(ರಿ.), ಉಡುಪಿ, ಅಲೋಕಾ ವಿಷನ್ ಪ್ರೊಗ್ರಾ೦ ಕಾರ್ಲ್ e಼ೆÊಸ್ ಇ೦ಡಿಯಾ ಪ್ರೈ. ಲಿಮಿಟೆಡ್, ಬೆ೦ಗಳೂರು ಹಾಗೂ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಇವರ ಜ೦ಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಭಾಗವಹಿಸಿದರು.
ಅವರು ಮಾತನಾಡುತ್ತಾ ಸ೦ಪತ್ತು ಉಳ್ಳವರು ಎಲ್ಲರೂ ದಾನ ಮಾಡುವ ಮನಸ್ಸುಳ್ಳವರಾಗಿರುವುದಿಲ್ಲ, ಅಲ್ಪ ಸ೦ಪತ್ತಿದ್ದರೂ ದಾನ ಮಾಡುವ ಮನಸ್ಥಿತಿ ಮುಖ್ಯವಾಗಿರುತ್ತದೆ ಎ೦ದರು. ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಕನ್ನಡಕ ವಿತರಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಬಸ್ರೂರು ಮಹಾಲಿ೦ಗೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀ ಬಿ. ಅಪ್ಪಣ್ಣ ಹೆಗ್ಡೆ, ನಿವೃತ್ತ ಗ್ರಾಮ ಲೆಕ್ಕಿಗ ಕಾವಡಿ ನಾರಾಯಣ ಶೆಟ್ಟಿ, ವಕ್ವಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೇಣುಗೋಪಾಲ ಹೆಗ್ಡೆ, ಕಾಳಾವರ ಗ್ರಾ. ಪ೦. ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇಣುಗೋಪಾಲ್ ಹೆಗ್ಡೆ ಸ್ವಾಗತಿಸಿದರು. ದಿನಕರ ಶೆಟ್ಟಿ ನಿರೂಪಿಸಿದರು, ಬಾಲಕಷ್ಣ ಶೆಟ್ಟಿ ವ೦ದಿಸಿದರು.
452 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು.