ಬೆಂಗಳೂರು : ವಾಹನಗಳ ದಾಖಲಾತಿಗಳನ್ನು ಭೌತಿಕವಾಗಿ ತೋರಿಸುವ ಅಗತ್ಯವಿಲ್ಲ – ಸಂಚಾರ ಜಂಟಿ‌ ಪೊಲೀಸ್ ಆಯುಕ್ತ ರವಿಕಾಂತೇಗೌಡ

ಬೆಂಗಳೂರು: ಸಂಚಾರ ಪೊಲೀಸರು ವಾಹನ ಸವಾರರಿಗೆ ಒಟ್ಟಿಗೆ ಎಲ್ಲಾ ದಂಡ ಪಾವತಿಸಲು ಒತ್ತಾಯ ಮಾಡುವಂತಿಲ್ಲ ಎಂದು ಸಂಚಾರ ಜಂಟಿ‌ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ.

ಹಳೆಯ ದಂಡಗಳನ್ನೆಲ್ಲಾ ಒಟ್ಟಿಗೆ ಪಾವತಿಸಲು ಪೊಲೀಸರಿಂದ ವಾಹನ ಸವಾರರಿಗೆ ಕಿರಿಕಿರಿ ಆಗುತ್ತಿರುವುದರಿಂದ Paytam ಮೂಲಕ ಒಂದು ಅಥವಾ ಎರಡು ಉಲ್ಲಂಘನೆ ದಂಡ ಪಾವತಿ ಮಾಡಬಹುದು ಎಂದು ಹೇಳಿದ್ದಾರೆ.Paytam ನಲ್ಲಿ ನಿನ್ನೆ ಒಂದು ದಿನದಲ್ಲಿ 3 ಲಕ್ಷ ದಂಡ ಪೆಟಿಎಮ್ ಮೂಲಕ ಸಂಗ್ರಹ ಆಗಿದೆ. Contact less enforcement ನಿಯಮ ಉಲ್ಲಂಘನೆ ಅಡಿಯಲ್ಲಿ ದಿನಕ್ಕೆ 45 ಸಾವಿರ ಪ್ರಕರಣಗಳ ದಾಖಲಾಗುತ್ತಿದೆ. FTVR ಮೂಲಕ 45 ಸಾವಿರ ಪ್ರಕರಣ ಗಳನ್ನು ಒಂದು ದಿನಕ್ಕೆ ದಾಖಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಡಿಜಿ ಲಾಕರ್ ಹಾಗೂ ಎಮ್ ಪರಿವಾಹನ್ ಆ್ಯಪ್ ಗಳನ್ನು ಸಾರ್ವಜನಿಕರು ಬಳಸಬಹುದು. ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಬುಕ್ ಸೇರಿದಂತೆ ಹಲವು ದಾಖಲೆಗಳನ್ನು ಡಿಜಿ‌ ಲಾಕರ್ ನಲ್ಲಿ ಇನ್ನೂ ತೋರಿಸಬಹುದು. ಭೌತಿಕವಾಗಿ ಇನ್ನೂ‌ ಮುಂದೆ ಪೊಲೀಸರ ಮುಂದೆ ತೋರಿಸುವ ಅಗತ್ಯ ಇಲ್ಲ ಎಂದು ಮಾಹಿತಿ ನೀಡಿದರು.ವಾಟ್ಸಪ್, ಇ ಮೇಲ್ ನಲ್ಲಿ ತೋರಿಸಿದ್ರೆ ಅದನ್ನ ಸ್ವೀಕರಿಸಲ್ಲ. ಕೇವಲ ಎರಡು ಆ್ಯಪ್ ಗಳಲ್ಲಿ ಮಾತ್ರ ಅಧಿಕೃತ ದಾಖಲೆಗಳನ್ನ ತೋರಿಸಬಹುದು ಎಂದು ಸಲಹೆ ನೀಡಿದರು.

ಭೌತಿಕವಾಗಿ ದಾಖಲಾತಿಗಳನ್ನು ತೋರಿಸುವಂತೆ ಪೊಲೀಸರು ಕೂಡ ಒತ್ತಾಯ ಮಾಡುವಂತ್ತಿಲ್ಲ. ಪೊಲೀಸರಿಗೂ ಕೂಡ ಈಗಾಗಲೇ ಸೂಚನೆ ನೀಡಲಾಗಿದೆ. ಪೊಲೀಸರು ಭೌತಿಕವಾಗಿ ತೋರಿಸುವಂತೆ ಒತ್ತಾಯ ಮಾಡಿದ್ರೇ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಜನರು ಇದರ ಪ್ರಯೋಜನ ಪಡೆಯಬೇಕಾಗಿ ವಿನಂತಿ ಮಾಡಿದರು.

 

 

 
 
 
 
 
 
 
 
 
 
 

Leave a Reply