ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್‌ನಿಂದ (MSME) ಸಾಲ ವಿತರಣೆ

ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪಟ್ಟಣ ಸಹಕಾರ ಬ್ಯಾಂಕ್ ಆಗಿರುವ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿ. ಆರ್.ಬಿ.ಐ. ಮಾರ್ಗಸೂಚಿಯಂತೆ ಆದ್ಯತಾ ವಲಯಕ್ಕೆ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಚಿವಾಲಯದ (MSME)  ಉದ್ಯಮ್ ಮೂಲಕ ನೋಂದಣಿ ಮಾಡಿಕೊಂಡ ಉದ್ಯಮಗಳಿಗೆ ಉತ್ತೇಜನ ನೀಡುತ್ತಿದೆ.. 
ಅದರಂತೆ ಶುಕ್ರವಾರದಂದು ನಡ್ಸಾಲ್ (ಪಡುಬಿದ್ರಿ) ಶಾಖೆಯಲ್ಲಿ ಉದ್ಯಮಿಯಾದ  ಕೌಸರ್ ನಿಯಾಜ್ ಅಮೀನಾರವರಿಗೆ ನಾಲ್ಕು ಮಹೀಂದ್ರಾ ಜೀತೊ ವಾಹನಗಳನ್ನು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಕುಮಾರಸ್ವಾಮಿ ಉಡುಪರವರು ವಿತರಿಸಿದರು. 
ಈ ಸಂದರ್ಭದಲ್ಲಿ ಬ್ಯಾಂಕಿನ ನಡ್ಸಾಲ್ ಶಾಖೆಯ ವ್ಯವಸ್ಥಾಪಕ  ಮೋಹನ್ ಶೆಟ್ಟಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply