ನಟಿ ಉರ್ಫಿ ಜಾವೇದ್ ದುಬೈ ಪೊಲೀಶ್ ವಶಕ್ಕೆ

ದುಬೈ: ಚಿತ್ರ ವಿಚಿತ್ರ ಡ್ರೆಸ್ ಧರಿಸಿ ಸದಾ ವಿವಾದದಲ್ಲಿ ಸಿಲುಕುತ್ತಿರುವ ನಟಿ ಹಾಗೂ ರೂಪದರ್ಶಿ ಉರ್ಫಿ ಜಾವೇದ್ ದುಬೈನಲ್ಲಿ ಕೂಡ ಅದೇ ಚಾಳಿ ಮುಂದುವರಿಸಿದ್ದಾರೆ. ಪರಿಣಾಮ ಕಾನೂನು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಉಡುಪು ಧರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ದುಬೈ ಪೊಲೀಸರು ನಟಿ ಉರ್ಫಿ ಜಾವೇದ್ ಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ದುಬೈ ಆಧುನಿಕ ಆಚಾರ ವಿಚಾರಗಳಿಗೆ ತೆರೆದುಕೊಂಡಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಉಡುಪು ಧರಿಸುವ ವಿಚಾರದಲ್ಲಿ ಕೆಲವು ಕಠಿಣ ಕಾನೂನುಗಳು ಈಗಲೂ ಜಾರಿಯಲ್ಲಿ ಇವೆ. ಮುಂಬೈನಲ್ಲಿ ಇರುವಾಗ ಚಿತ್ರ ವಿಚಿತ್ರ ಉಡುಪು ಧರಿಸಿ ಓಡಾಡುತ್ತಿದ್ದ ನಟಿ ಇದೀಗ ದುಬೈನಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ

 
 
 
 
 
 
 
 
 
 
 

Leave a Reply