ಪಠ್ಯೇತರ ಚಟುವಟಿಕೆಗಳಿಂದ ಪ್ರತಿಭಾವಿಕಾಸ- ಪ್ರೊಫೆಸರ್ ದಯಾನಂದ

ಪ್ರತಿ ವಿದ್ಯಾರ್ಥಿಗಳಲ್ಲೂ ಪ್ರತಿಭಾವೈವಿಧ್ಯಗಳಿವೆ ಅವುಗಳ ಅನಾವರಣಕ್ಕೆ ಅವಕಾಶವಿತ್ತಾಗ ಸದ್ಬಳಕೆಯಾಗಬೇಕು, ಸೋಲೇ ಗೆಲುವಿನ ಸೋಪಾನವಾಗಿದ್ದು ಸತತ ಪ್ರಯತ್ನಗಳಿಂದ ಯಶಸ್ಸು ಶತಃಸಿದ್ಧ, ಕಾಲೇಜುಗಳಲ್ಲಿ ದೊರೆಯುವ ಸುವರ್ಣಾವಕಾಶವನ್ನು ಹಿಂಜರಿಕೆ, ಕೀಳರಿಮೆ ಇಲ್ಲದೆ ಧೈರ್ಯದಿಂದ ಉಪಯೋಗಿಸಿಕೊಳ್ಳಬೇಕು, ವಿದ್ಯೆಯ ಜೊತೆಗೆ ವಿನಯದಿಂದ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸುವುದರಿಂದ ಸುಸಂಸ್ಕೃತ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯವಾಗುವುದಾಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊಫೆಸರ್ ದಯಾನಂದ ಹೇಳಿದರು.
ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಡಿಸೆಂಬರ್ 13ರಂದು ನಡೆದ ಶೈಕ್ಷಣಿಕ ವರ್ಷದ ಸಹಪಠ್ಯ-ಪಠ್ಯೇತರ ಚಟುವಟಿಕೆಗಳನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು. ಗುಂಪಿನಲ್ಲಿ ಮಾತನಾಡುವ ನಾವು ವೇದಿಕಯಲಿ ಮಾತನಾಡುವಂತಾಗಬೇಕು, ಸ್ನಾನಗೃಹದಲ್ಲಿ ಹಾಡುವ ನಾವು ವೇದಿಕೆಯಲಿ ಹಾಡುವಂತಾಗಬೇಕು ಸತತ ಪರಿಶ್ರಮಗಳಿಂದ ಇದು ಸಾಧ್ಯವಾಗಿದ್ದು ಇದಕ್ಕಾಗಿ ಕಾಲೇಜುಗಳ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
ಲಲಿತಕಲಾ ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಲಾಕ್ಷೇತ್ರದಲ್ಲಿ ಈಗ ಮಿನುಗುತ್ತಿರುವ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಕು.ವೈಷ್ಣವಿ ಭಂಡಾರ್ಕಾರ್ ತಮ್ಮ ಅನುಭವವನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಸ್ವಾಗತಿಸಿದರು. ವಿದ್ಯಾರ್ಥಿನಿ ಮೇಘನಾ ವಂದಿಸಿದರು, ಶರಣ್ಯಾ ನಾಯಕ್ ನಿರೂಪಿಸಿದರು, ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಶೇಖರ್ ಸಂಯೋಜಿಸಿದರು.

 
 
 
 
 
 
 
 
 

Leave a Reply