ಯು.ಪಿ.ಎಂ.ಸಿ – ಫ್ರೆಶರ್ಸ್ ಡೇ ಕಾರ್ಯಕ್ರಮ

ಶೈಕ್ಷಣಿಕ ವರ್ಷ 2022ರಲ್ಲಿ ಹೊಸತಾಗಿ ಕಾಲೇಜು ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಶುಭಕಾಮನೆಯ ಮೂಲಕ ಬರಮಾಡಿಕೊಳ್ಳುವ ಕಾರ್ಯಕ್ರಮವು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಡಿಸೆಂಬರ್ 10ರಂದು ಜರಗಿತು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಿಯು ಹಂತದಿಂದ ಪದವಿಗೆ ಪ್ರವೇಶಿಸುವ ವಿದ್ಯಾರ್ಥಿಗಳ ಮನದಲ್ಲಿ ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸ, ಸ್ನೇಹ ಬೆಳೆಯಲು ಇದೊಂದು ಉತ್ತಮ ವೇದಿಕೆಯಾಗಿದ್ದು ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಸ್ಫೂರ್ತಿ ತುಂಬುತ್ತಾ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟರು.

ಕಾಲೇಜಿನ ಅಂತಿಮ ಬಿ.ಕಾಂ, ಬಿಬಿಎ ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಜ್ವಲ್ ಕಾಮತ್, ಸೂರಜ್ ಕುಮಾರ್, ಪ್ರಖ್ಯಾತ್, ಶ್ರೀಶ ಶೆಣೈ, ಸಂಗೀತ ಪೈ, ನಿಧಿ, ಪೂರ್ಣಚಂದ್ರಪ್ರಭ, ಫೈಸ್ಹ್ ಮೊಹಮ್ಮದ್, ಝಾಹಿದ್ ಕೋಯಾ, ಶೇಖ್ ಸಹಿಲ್, ಧೀಕ್ಷಾ ಆಚಾರ್ಯ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾಲೇಜಿನ ಪ್ರಾಚಾರ್ಯರರು ಬಹುಮಾನಗಳನ್ನು ವಿತರಿಸಿದರು. ಮೋಹಿತ್ ತೃತೀಯ ಬಿಬಿಎ ಸ್ವಾಗತಿಸಿದರು, ನಿಧಿ ತೃತೀಯ ಬಿ.ಕಾಂ ವಂದಿಸಿದರು, ಶಶಾಂಕ್ ದೇವಾಡಿಗ ತೃತೀಯ ಬಿ.ಕಾಂ ಮತ್ತು ನೌಶೀನ್ ದ್ವಿತೀಯ ಬಿ.ಕಾಂ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply