ಯು.ಪಿ.ಎಂ.ಸಿ- ‘ದಿಶಾ’ ಮಹಿಳಾವೇದಿಕೆ ಕಾರ್ಯಕ್ರಮ

ಕನಸಿನ ಲೋಕಕ್ಕೂ ವಾಸ್ತವಿಕ ಬದುಕಿಗೂ ಅಜಗಜಾಂತರವಿದ್ದು ವರ್ತಮಾನ ಜಗತ್ತಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಂಡು ಜೀವನ ನಡೆಸಬೇಕು. ಕೆಸರನ್ನು ತೊಳೆಯುವುದಕ್ಕಿಂತ ಅದನ್ನು ಮುಟ್ಟದಿರುವುದೇ ಲೇಸು, ಹಾಗೆಯೇ ಸಾಮಾಜಿಕ ಜಾಲತಾಣವನ್ನು ದುರುಪಯೋಗಿಸಿ ಪಶ್ಚಾತ್ತಾಪ ಪಡುವುದಕ್ಕಿಂತ ಮುಂಚೆ ಅವುಗಳ ಬಗೆಗೆ ಜಾಗೃತಿಯನ್ನು ಮೂಡಿಸಿಕೊಳ್ಳುವುದು ಅತ್ಯವಶ್ಯ. ಅನಾವಶ್ಯವಾಗಿ ಯಾವುದೇ ಖಾಸಗಿ ವಿಚಾರಗಳನ್ನು ಜಾಲತಾಣಗಳಲ್ಲಿ ಹರಿಸದೆ ಸದ್ಬಳಕೆಗಾಗಿ ಮಾತ್ರ ಅವುಗಳ ಉಪಯೋಗ ಆಗಬೇಕು ಎಂದು ಡಾ.ಎ.ವಿ. ಬಾಳಿಗ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಸೌಜನ್ಯ ಶೆಟ್ಟಿಯವರು ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ‘ದಿಶಾ’ ಲೇಡೀಸ್ ಕ್ಲಬ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಮಹಿಳಾ ಸಬಲೀಕರಣ’ ಎಂಬ ವಿಷಯದ ಬಗೆಗೆ ಮಾತನಾಡುತ್ತಿದ್ದರು.

ಸಕಾಲಕ್ಕೆ ಕೌಟುಂಬಿಕ ಜವಾಬ್ದಾರಿಗಳ ನಿರ್ವಹಣೆ, ಮಹಿಳಾ ಸಮಾನತೆ ಹಕ್ಕುಗಳು, ಅಡೆತಡೆಗಳನ್ನು ದಾಟಿ ಯಶಸ್ಸಿನತ್ತ ಸಾಗುವ ವಿಧಾನಗಳು, ಮಹಿಳೆಯರ ಶೈಕ್ಷಣಿಕ ಮತ್ತು ಸಾಮಾಜಿಕ ಹಕ್ಕುಗಳು, ಕೋಪವನ್ನು ನಿಯಂತ್ರಿಸುವ ವಿಧಾನಗಳು, ಮಾದಕ ದ್ರವ್ಯದ ವ್ಯಸನದಿಂದ ಉಂಟಾಗುವ ಮಾನಸಿಕ ಸಮಸ್ಯೆಗಳು, ಸೈಬರ್ ಕ್ರೈಂ ನ ವಿಧಗಳು, ವೈವಾಹಿಕ ಜಾಲತಾಣಗಳ ಬಗೆಗಿನ ವಾಸ್ತವ ವಿಷಯಗಳು, ಸರಿಯಾದ ಅರಿವಿಲ್ಲದೆ ಅದರ ಬಳಕೆಯಿಂದ ಆಗುವ ದುಷ್ಪರಿಣಾಮಗಳು. ಇತ್ಯಾದಿಗಳನ್ನು ಸೋದಾಹರಣವಾಗಿ ವಿವರಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದ. ಉಪಪ್ರಾಚಾರ್ಯರಾದ ಶ್ರೀಮತಿ ಆಶಾ ಹೆಗ್ಡೆ, ದಿಶಾ ಲೇಡೀಸ್ ಕ್ಲಬ್ ನ ಸಂಚಾಲಕಿ ಶ್ರೀಮತಿ ಜಯಲಕ್ಷ್ಮಿ ಎಲ್, ಸಹ ಸಂಚಾಲಕಿ ಇಂದಿರಾ ಕೆ.ಸ್ ಉಪಸ್ಥಿತರಿದ್ದರು.
ದ್ವಿತೀಯ ಬಿ.ಬಿ.ಎ ವಿದ್ಯಾರ್ಥಿನಿಯರಾದ ರಕ್ಷಿತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಆಶಿಕಾ ವಂದಿಸಿದರು.

 
 
 
 
 
 
 
 
 
 
 

Leave a Reply