Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಯು.ಪಿ.ಎಂ.ಸಿ ಎಕ್ಸ್ ಪ್ಲೋರಿಕಾ- 2022- ಉತ್ಸವಕ್ಕೆ ಚಾಲನೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಹಮ್ಮಿಕೊಂಡ ಎಕ್ಸ್ ಪ್ಲೋರಿಕಾ- 2022- ಉತ್ಸವಕ್ಕೆ ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ ಭಟ್ ಇವರು ದೀಪ ಬೆಳಗಿಸುವ ಮೂಲಕ ಆಗಸ್ಟ್ 4 ರಂದು ಚಾಲನೆ ನೀಡಿದರು.
ಸಾಂಪ್ರದಾಯಿಕ ಪಾಠಪ್ರವಚನಗಳ ಜೊತೆಗೆ ವಿದ್ಯಾರ್ಥಿಗಳೇ ಹಮ್ಮಿಕೊಳ್ಳುವ ಇಂತಹ ಉತ್ಸವಗಳು ಅವರ ಮಾನಸಿಕ ಬಲ, ನಿರ್ವಹಣಾ ಕೌಶಲಗಳ ಅಭಿವ್ಯಕ್ತಿಗೆ ಸಹಕಾರಿಯಾಗಿದ್ದು ಭವಿಷ್ಯದಲ್ಲಿ ಧೈರ್ಯ ಸ್ಥೈರ್ಯಗಳಿಂದ ಸಮಾಜದಲ್ಲಿ ಮುನ್ನೆಡೆದು ಉತ್ತಮ ಸ್ಥಾನಮಾನಗಳನ್ನು ದೊರಕಿಸಿಕೊಳ್ಳಲು ಅನುಕೂಲವಾಗುವುದಾಗಿ ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಆಡಳಿತ ಮಂಡಳಿ ಡಾ.ಟಿ.ಎಂ.ಎ ಪೈ ಫೌಂಡೇಶನ್ ಇದರ ಅಧ್ಯಕ್ಷರಾದ ಶ್ರೀ ಟಿ.ಮೋಹನದಾಸ್ ಪೈಗಳವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಕಾಲೇಜಿನ ಉಪ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ, ಉತ್ಸವದ ಅಧ್ಯಾಪಕ ಸಲಹೆಗಾರರಾದ ಶ್ರೀ ಹರಿಕೇಶವ್, ಶ್ರೀ ಚಂದ್ರಶೇಖರ್, ಕುಮಾರಿ ಇಂದಿರ, ಶ್ರೀಮತಿ ಪುರೋಭಿ ಅವಿನಾಶ್, ವಿದ್ಯಾರ್ಥಿ ಪ್ರತಿನಿಧಿಗಳಾದ ಆದರ್ಶ್ ಆಚಾರ್ಯ, ಕಾರ್ತಿಕ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ದೀಪ್ತಿ ಪೂಜಾರಿ ಸ್ವಾಗತಿಸಿದರು, ಹನೀಶ ಪ್ರೀಮಾ ವಂದಿಸಿದರು, ಅಸೀಲ್ ಅಕ್ರಂ ಮತ್ತು ನಿಕಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!