ಪರಿಸರ ಪ್ರಜ್ಞೆ ಮತ್ತು ಹಸಿರು ಶಕ್ತಿ ಬಳಕೆ ವಿಶೇಷೋಪನ್ಯಾಸ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಎನ್.ಎಸ್.ಎಸ್ ಘಟಕ ಹಾಗೂ ರೋಟರಿ ಕ್ಲಬ್ ಉಡುಪಿ ರಾಯಲ್ ಇವರ ಸಹಯೋಗದೊಂದಿಗೆ ಪರಿಸರ ಪ್ರಜ್ಞೆ ಮತ್ತು ಹಸಿರು ಶಕ್ತಿ ಬಳಕೆಯ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ಜುಲೈ 21ರಂದು ಯು.ಪಿ.ಎಂ.ಸಿ ಸಭಾಂಗಣದಲ್ಲಿ ನಡೆಯಿತು.


ಎಂ.ಐ.ಟಿ ಮಣಿಪಾಲದ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಮಡ್ಡೋಡಿಯವರು ಪರಿಸರ ಪ್ರಜ್ಞೆಯ ಬಗ್ಗೆ ಮಾತನಾಡುತ್ತಾ ಗಿಡಮರಗಳನ್ನು ಬೆಳೆಸುವ ಮೂಲಕ ಸ್ವಾಭಾವಿಕವಾಗಿ ಆಮ್ಲಜನಕವನ್ನು ಉತ್ಪಾದಿಸುವ ಬಗೆಗೆ ಮಾಹಿತಿ ನೀಡಿದರು. ಎಂ.ಐ.ಟಿ ಮಣಿಪಾಲದ ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಅಸೋಸಿಯೇಟ್ ಪ್ರೊಫೆಸರ್ ಡಾ.ಡಿ.ಎಚ್.ಕೆ ಮೂರ್ತಿಯವರು ಸ್ವಾಭಾವಿಕವಾದ ವಿದ್ಯುಚ್ಛಕ್ತಿಯ ಕೊರತೆಯಾದಾಗ ಇದ್ದಿಲಿನ ಮೂಲಕ ಹೈಡ್ರೋಜನ್ ಉತ್ಪಾದಿಸಿ ಅದನ್ನು ವಿದ್ಯುತ್ ಆಗಿ ಪರಿವರ್ತಿಸಿ ಬಳಕೆಮಾಡಬಹುದಾದ ಮಾಹಿತಿಯನ್ನು ನೀಡಿದರು.

ರೋಟರಿ ಕ್ಲಬ್ ಉಡುಪಿ ರಾಯಲ್ ನ ಕಾರ್ಯದರ್ಶಿ ರೊಟೇರಿಯನ್ ಶ್ರೀ ರತ್ನಾಕರ್ ಇಂದ್ರಾಳಿ, ಎನ್.ಎಸ್.ಎಸ್ ಸಂಯೋಜನಾಧಿಕಾರಿ ರಾಜೇಶ್ ಕುಮಾರ್, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಪ್ರಥಮ ಬಿಬಿಎ ವಿದ್ಯಾರ್ಥಿನಿಯರಾದ ಪ್ರಣೀತಾ ಸ್ವಾಗತಿಸಿದರು, ಆಶಿಕಾ ವಂದಿಸಿದರು, ದಿಯಾ ಪಾಟ್ಕರ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply