ಜಿಲ್ಲಾ ಮಟ್ಟದ ಉನ್ನತಿ ಸಂಚಲನ ಮೆಗಾ ಸ್ಕಾಲರ್ ಶಿಪ್ ಸ್ಪರ್ಧೆಯ ಫಲಿತಾಂಶ

 ಜಿಲ್ಲೆಯ 807 ಅಭ್ಯರ್ಥಿಗಳಿಗೆ ಸ್ಕಾಲರ್ ಶಿಪ್ ಅರ್ಹತೆ

ಕೌಶಲ್ಯಾಧಾರಿತ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉನ್ನತಿ ಕೆರಿಯರ್ ಅಕಾಡೆಮಿ ಹಾಗೂ ಸಂಚಲನ ಸ್ವಯಂ ಸೇವಾ ಸಂಘಟನೆಯ ಜಂಟಿ ಆಯೋಜನೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ “ಉನ್ನತಿ ಸಂಚಲನ ಮೆಗಾ ಶಿಪ್ ಸ್ಪರ್ಧೆ”ಯು ಇಂದು ಮುಕ್ತಾಯಗೊಂಡು ಫಲಿತಾಂಶ ಘೋಷಿಸಲಾಗಿದೆ. ಈ ಸ್ಪರ್ಧೆಯಲ್ಲಿ ಜಿಲ್ಲೆಯ 25 ಪದವಿ ಕಾಲೇಜಿನ 1144 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಸ್ಪರ್ಧೆಯಲ್ಲಿ 807
ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ಬಿ ಎಫ್ ಎಸ್ ಐ ಕ್ಷೇತ್ರದ ಮೂರು ಕೋರ್ಸ್ ತರಬೇತಿಗಳಾದ ಕೆ ವೈ ಸಿ-ಆಂಟಿ ಮನಿ ಲಾಂಡೆರಿಂಗ್, ಕಸ್ಟಮರ್ ಸರ್ವಿಸ್ ಮತ್ತು ಬ್ಯಾಂಕಿಂಗ್ ಸ್ಟ್ಯಾಂಡರ್ಡ್ಸ್ ಕೋಡ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಹಾಗೂ ಐಟಿ ಕ್ಷೇತ್ರದ ಮೂರು ತರಬೇತಿಗಳಾದ ಫ್ರ0ಟ್ ಎಂಡ್ ಡೆವಲಪ್ಮೆಂಟ್, ಬ್ಯಾಕ್ ಎಂಡ್ ಡೆವಲಪ್ಮೆಂಟ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರಗಳ ಫಲಿತಾಂಶದಂತೆ ಜಿಲ್ಲೆಯ 53 ವಿದ್ಯಾರ್ಥಿಗಳು ಸಂಪೂರ್ಣ ದತ್ತು ಸ್ವೀಕಾರಕ್ಕೆ, 92 ವಿದ್ಯಾರ್ಥಿಗಳು ಶೇ.75% ಸ್ಕಾಲರ್ ಶಿಪ್ ಗೆ, 114 ವಿದ್ಯಾರ್ಥಿಗಳು ಶೇ.50% ಸ್ಕಾಲರ್ ಶಿಪ್ ಗೆ, 176 ವಿದ್ಯಾರ್ಥಿಗಳು ಶೇ.25% ಸ್ಕಾಲರ್ ಶಿಪ್ ಗೆ ಹಾಗೂ 425 ವಿದ್ಯಾರ್ಥಿಗಳು ರೂ.2000 ವರೆಗಿನ ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದಿರುತ್ತಾರೆ. ಒಟ್ಟಾರೆ ಜಿಲ್ಲೆಯ 807 ವಿದ್ಯಾರ್ಥಿಗಳು ಈ ಸ್ಪರ್ಧೆಯ ಮೂಲಕ ಮುಂದಿನ 3 ತಿಂಗಳ ಅವಧಿಯಲ್ಲಿ ತರಬೇತಿ ಪಡೆದು ಉತ್ತಮ ಉದ್ಯೋಗವಕಾಶವನ್ನು ಗಿಟ್ಟಿಸಲು ಇದೊಂದು ಸುವರ್ಣಾವಕಾಶ ಎಂದು ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ಎಲ್ಲಾ ಕೋರ್ಸ್ ಗಳಿಗೆ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಪಡೆದುಕೊಳ್ಳಬೇಕೆಂದು ಹಾಗೂ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ತಿಂಗಳ 20ರೊಳಗೆ ಸ್ಕಾಲರ್ ಶಿಪ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿರುತ್ತಾರೆ

 
 
 
 
 
 
 
 
 
 
 

Leave a Reply