ಉಡುಪಿಯಲ್ಲಿ ಲಾಕ್ ಡೌನ್ ಸಡಿಲಿಕೆ ದುರುಪಯೋಗ ಮಾಡವವರ ವಿರುದ್ಧ ಎಪಿಡೆಮಿಕ್ ಆಕ್ಟ್ ನಡಿ ಕಠಿಣ ಕ್ರಮ : ಜಿಲ್ಲಾಧಿಕಾರಿ

ಉಡುಪಿ: ಲಾಕ್ ಡೌನ್ ಸಡಿಲಿಕೆಯನ್ನು ದುರುಪಯೋಗ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಲ್ಲಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ, ಈ ಕಾರ್ಯಕ್ರಮಗಳಿಗೆ ಅನುಮತಿ ಕೊಟ್ಟವರಾರು? ಹೋಟೆಲುಗಳಲ್ಲಿ ಸಂಜೆ 6 ಗಂಟೆ ತನಕ ಜನರು ಸೇರುತ್ತಾರೆ, ಬಸ್ ಗಳಲ್ಲಿ 50ಕ್ಕಿಂತ ಹೆಚ್ಚು ಪ್ರಯಾಣಿಕರು ಕಂಡುಬರುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೆ ಕಾರ್ಯಕ್ರಮ ನಡೆಸಲು ಅನುಮತಿ ಕೊಟ್ಟವರು ಯಾರು? ಲಾಕ್ಡೌನ್ ಸಡಿಲಿಕೆಯನ್ನು ಯಾರೂ ದುರುಪಯೋಗ ಮಾಡಬಾರದು.

ಒಂದು ವೇಳೆ ದುರುಪಯೋಗ ಮಾಡಿದರೆ ಅಂಥವರ ವಿರುದ್ಧ ಎಪಿಡೆಮಿಕ್ ಆಕ್ಟ್ ನಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. .

 
 
 
 
 
 
 
 
 
 
 

Leave a Reply