Janardhan Kodavoor/ Team KaravaliXpress
25.6 C
Udupi
Saturday, July 2, 2022
Sathyanatha Stores Brahmavara

ಸಿಎಂ ಠಾಕ್ರೆ ಮನೆ ಮುಂದೆ ಹನುಮಾನ್​ ಚಾಲೀಸಾ ಪಠಿಸುವ ಸವಾಲು

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್​ ಚಾಲೀಸಾ ಪಠಿಸುವ ಸವಾಲು ಹಾಕಿದ್ದ ಶಾಸಕ ರವಿ ರಾಣಾ ಹಾಗೂ ಅವರ ಪತ್ನಿ ಅಮರಾವತಿ ಸಂಸದೆ ನವನೀತ್ ಕೌರ್​​ ಅವರನ್ನು ಮುಂಬೈ ಪೊಲೀಸರು ಬಂಧನ ಮಾಡಿದ್ದಾರೆ.

ಈ ಹಿಂದೆ ‘ನೀವೂ ಹನುಮಾನ್ ಚಾಲೀಸಾ ಪಠಿಸಬೇಕು.ಇಲ್ಲ ನಾವೇ ನಿಮ್ಮ ಮನೆ ಮುಂದೆ ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆಂದು’ ಎಂದು ನವನೀತ್​-ರಾಣಾ ದಂಪತಿ ಸಿಎಂಗೆ ಸವಾಲು ಹಾಕಿದ್ದರು. ಈ ಹಿನ್ನೆಲೆ ಮುಂಬೈಗೆ ಸಹ ಆಗಮಿಸಿದ್ದರು.

ಆದರೆ, ನಾಳೆ ಮುಂಬೈಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಕಾರಣ ತಮ್ಮ ನಿರ್ಧಾರವನ್ನು ರದ್ಧು ಮಾಡುತ್ತಿರುವುದಾಗಿ ಅವರು ಕೆಲ ಗಂಟೆಗಳ ಹಿಂದೆ ಘೋಷಣೆ ಮಾಡಿದ್ದರು.

ಇದರ ಬೆನ್ನಲ್ಲೇ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ.ಇವರ ವಿರುದ್ಧ ಐಪಿಸಿ ಸೆಕ್ಷನ್​ 153A (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ) ಅಡಿ ಪ್ರಕರಣ ದಾಖಲು ಮಾಡಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!