ಉಡುಪಿ : “ನೂಪುರ್ ಶರ್ಮಾರವರನ್ನು ಬೆಂಬಲಿಸಿದ್ದಕ್ಕೆ ಉದಯಪುರ ದಲ್ಲಿ ಓರ್ವ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ” ಎಂದು ಅಮೃತ್ ಶೆಣೈ ಹೇಳಿದ್ದಾರೆ.
“ಇದು ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲ,
ನೂಪುರ್ ಶರ್ಮಾ ಇರಲಿ ಯಾರೇ ಇರಲಿ, ಮಾಡಿದ ತಪ್ಪಿಗೆ ಅದರ ಘೋರತೆಗೆ ಅನುಗುಣವಾಗಿ ನ್ಯಾಯಾಲಯ ಶಿಕ್ಷೆ ನೀಡಬೇಕು, ಈ ಹತ್ಯೆ ಖಂಡನೀಯ,ನಾಗರಿಕ ಸಮಾಜ ಹಾಗೂ ಪ್ರಜಾಪ್ರಭುತ್ವ ದಲ್ಲಿ ಹತ್ಯೆಯನ್ನು ಒಪ್ಪಲು ಸಾಧ್ಯ ಇಲ್ಲ.
ಅದಲ್ಲದೇ ಅವರು ಪ್ರಧಾನಿ ಮೋದಿಯವರಿಗೂ ಜೀವ ಬೆದರಿಕೆ ಒಡ್ಡುವ ವೀಡಿಯೋ ಮಾಡಿದ್ದಾರೆ, ನಾವು ಮೋದಿಯವರ ವಿಚಾರಗಳನ್ನು , ಆಡಳಿತವನ್ನು, ಮಾತುಗಳನ್ನು, ಕೃತ್ಯಗಳನ್ನು ಒಪ್ಪುವುದಿಲ್ಲ, ಆದರೆ ಅವರು ದೇಶದ ಪ್ರಧಾನಿ, ಅವರನ್ನು ನಾವು ಚುನಾವಣೆಯಲ್ಲಿ ಸೋಲಿಸುವುದೇ ನಮ್ಮ ಗುರಿ ಆಗಬೇಕು ವಿನಹ ಹಿಂಸೆಗಿಳಿಯುವುದು ನಾಗರಿಕ ಲಕ್ಷಣ ಅಲ್ಲ.
ಉಡುಪಿ ಸಹಬಾಳ್ವೆಯ ಅಧ್ಯಕ್ಷನ ನೆಲೆಯಲ್ಲಿ ಈ ಕೃತ್ಯವನ್ನು ಖಂಡಿಸುತ್ತೇನೆ, ಇಂತಹ ಕೃತ್ಯ ಮಾಡಿದವರನ್ನು ಕೂಡಲೇ ಬಂಧಿಸಬೇಕು,ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಕೃತ್ಯಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು” ಎಂದು ಅಮೃತ್ ಶೆಣೈ ಹೇಳಿಕೆ ನೀಡಿದ್ದಾರೆ.