ಉಚ್ವಿಲ ಶ್ರೀ ಮಹಾಲಕ್ಷ್ಮೀ ದೇವರಿಗೆ ಸಂಭ್ರಮ

ಕಾಪು: ಸಮಗ್ರವಾಗಿ ಪುನರ್ ನಿರ್ಮಾಣಗೊಂಡಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶನಿವಾರ ಬ್ರಹ್ಮಕಲಶ ಪುಣ್ಯೋತ್ಸವ ಸಂಪನ್ನಗೊಂಡಿತು.

ಶನಿವಾರ ಬೆಳಿಗ್ಗೆ 6.00 ಗಂಟೆಯಿಂದ ಮೊದಲ್ಗೊಂಡು ಬ್ರಹ್ಮಕಲಶೋತ್ಸವದ ಧಾರ್ಮಿಕ‌ ಕಾರ್ಯಕ್ರಮಗಳಿಗೆ ಚಾಲನೆ ದೊರಕಿದ್ದು, 9.36ರ ಶುಭ ಮುಹೂರ್ತದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಗೆ ಸಹಸ್ರ ಕಲಶ ಸಹಿತ ಬ್ರಹ್ಮಕಲಶೋತ್ಸವ ನಡೆಯಿತು. ಬಳಿಕ ಶ್ರೀ ಪ್ರಸನ್ನ ಗಣಪತಿ ದೇವರು, ಶ್ರೀ ಭದ್ರಕಾಳಿ‌ ಅಮ್ಮನವರಿಗೆ ಬ್ರಹ್ಮಕಲಶ ನಡೆದು ಮಹಾ ಅನ್ನಸಂತರ್ಪಣೆಯ ಪಲ್ಲ ಪೂಜೆ ನಡೆಯಿತು.

ಶ್ರೀ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ, ಹಿರಿಯ ಅರ್ಚಕ ವೇ.ಮೂ. ವೆಂಕಟನರಸಿಂಹ ಉಪಾಧ್ಯಾಯ, ವೇ.ಮೂ. ರಾಘವೇಂದ್ರ ಉಪಾಧ್ಯಾಯ, ವೇ.ಮೂ. ವಿಷ್ಣುಮೂರ್ತಿ ಉಪಾಧ್ಯಾಯ, ವಾಸ್ತುತಜ್ಞ ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಹಾಗೂ ಆಗಮ ತಂತ್ರವರೇಣ್ಯರು, ವೇದಜ್ಞ, ಋತ್ವಿಜರ ಸಹಕಾರದೊಂದಿಗೆ ಬ್ರಹ್ಮಕಲಶ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡವು.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ / ಬ್ರಹ್ಮಕಲಶ ಪುಣ್ಯೋತ್ಸವ ಸಮಿತಿ ಅಧ್ಯಕ್ಷ ಡಾ. ಜಿ. ಶಂಕರ್, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮುಂಬಯಿ ಜೀರ್ಣೋದ್ಧಾರ ಸಮಿತಿ ವೇದಪ್ರಕಾಶ್ ಶ್ರೀಯಾನ್, ಮಹಿಳಾ‌ ಸಂಘದ ಅಪ್ಪಿ ಸಾಲ್ಯಾನ್, ಕಾಪು ಶಾಸಕ ಲಾಲಾಜಿ‌ ಆರ್. ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಯು.ಆರ್. ಸಭಾಪತಿ, ಪ್ರಮುಖರಾದ ಯಶ್ಪಾಲ್ ಸುವರ್ಣ, ಬಿ. ಕೇಶವ ಕುಂದರ್, ಶ್ರೀಪತಿ ಭಟ್ ಉಚ್ಚಿಲ, ಆನಂದ ಸಿ. ಕುಂದರ್, ನಯನಾ ಯು. ಗಣೇಶ್, ವೈ. ಗಂಗಾಧರ ಸುವರ್ಣ, ಭುವನೇಂದ್ರ ಕಿದಿಯೂರು, ಕೇಶವ ಕೋಟ್ಯಾನ್, ಶಿವಪ್ಪ ಟಿ. ಅಮೀನ್, ಎನ್. ಟಿ. ಅಮೀನ್, ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ, ಶಿಲ್ಪಾ ಗಂಗಾಧರ ಸುವರ್ಣ, ರಾಜೇಂದ್ರ ಸುವರ್ಣ, ಮೋಹನ್ ಬೇಂಗ್ರೆ, ಅನಿಲ್‌ ಕುಮಾರ್, ಭರತ್ ಉಳ್ಳಾಲ, ಉಮೇಶ್ ಕರ್ಕೇರ, ಎನ್.ಟಿ. ಅಮೀನ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply