ಎಪ್ರಿಲ್ 24, ಪಣಿಯಾಡಿ ಪ್ರಶಸ್ತಿ ಸಮಾರಂಭ.

ತುಳುಕೂಟ ಉಡುಪಿ(ರಿ) ವತಿಯಿಂದ, ತುಳುಭಾಷೆ, ಸಂಸ್ಕೃತಿ, ಸಾಹಿತ್ಯ ಕ್ಕಾಗಿ ಅಪಾರ ಸೇವೆಯನ್ನು  ಸಲ್ಲಿಸಿದ, ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡ, ಹಿರಿಯ ಸಾಹಿತ್ಯ ಚೇತನ ದಿ. ಶ್ರೀನಿವಾಸ ಉಪಾಧ್ಯಾಯ ಪಣಿಯಾಡಿ ಇವರ ಸ್ಮರಣಾರ್ಥ  ನಡೆಸುವಂತಹಾ 27 ನೇ ವರ್ಷ ದ “ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ “ ಸಮಾರಂಭವು ಇದೇ ತಿಂಗಳ ತಾರೀಕು 24-4-2022 ರ ಭಾನುವಾರದಂದು, ಸಮಯ ಸಂಜೆ 4 ಗಂಟೆ ಗೆ ಸರಿಯಾಗಿ ಉಡುಪಿಯ ಹೋಟೇಲ್ ಕಿದಿಯೂರ್ ನ “ಪವನ್ ರೂಫ್ ಟಾಪ್ ನಲ್ಲಿ ಜರುಗಲಿದೆ.
ಈ ಬಾರಿಯ ಪಣಿಯಾಡಿ ಕಾದಂಬರಿ ಪ್ರಶಸ್ತಿ 2021 ,ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ, ಪ್ರೊ. ಅಕ್ಷಯ .ಆರ್.ಶೆಟ್ಟಿ ಪೆರಾರ, ಇವರು  ಬರೆದ “ದೆಂಗ” ತುಳು ಕಾದಂಬರಿಗೆ ಲಭಿಸಿದ್ದು, 
ಕಾರ್ಯಕ್ರಮದಂದು, ಅವರ ಪ್ರಶಸ್ತಿ ವಿಜೇತ “ದೆಂಗ” ಕಾದಂಬರಿಯನ್ನು, ಮುಖ್ಯ ಅತಿಥಿ ಉದ್ಯಮಿ, ಶ್ರೀಯುತ ಸುರೇಶ್ ಶೆಟ್ಟಿ ಗುರ್ಮೆ ಯವರು ಬಿಡುಗಡೆಗೊಳಿಸಲಿದ್ದಾರೆ. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟ ಉಡುಪಿ(ರಿ) ನ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ ಇವರು ವಹಿಸಲಿದ್ದು, “ದೆಂಗ “ಕಾದಂಬರಿ ಯ ಕೃತಿ ಪರಿಚಯವನ್ನು, ಹಿರಿಯಡಕ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ, ತುಳು ಸಾಹಿತಿ, ಜಾನಪದ ಸಂಶೋಧಕಿ ಡಾ. ನಿಕೇತನ ಇವರು ನಡೆಸಿಕೊಡಲಿದ್ದಾರೆ.ಖ್ಯಾತ ತುಳು ಜಾನಪದ ವಿದ್ವಾಂಸರಾದ ಕೆ.ಎಲ್ . ಕುಂಡಂತಾಯರು ಪಣಿಯಾಡಿ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರಿನ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ ದ ಸಂಯೋಜಕರಾದ ಮಾಧವ ಎಂ.ಕೆ ಹಾಗೂ ಉಡುಪಿಯ ಉದ್ಯಮಿ ಮತ್ತು ಸಮಾಜಸೇವಕರಾದ  ವಿಶ್ವನಾಥ ಶೆಣೈ ಇವರು ಭಾಗವಹಿಸಲಿದ್ದಾರೆ.
ಎಂದು, ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಹಾಗೂ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಸಂಚಾಲಕಿ,  ತಾರಾ ಉಮೇಶ್ ಆಚಾರ್ಯ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
 
 
 
 
 
 
 
 
 
 
 

Leave a Reply