ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಬೇಕು, ತುಳು ರಾಜ್ಯ ಬೇಡಿಕೆಗೆ ಬೆಂಬಲವಿಲ್ಲ~ಸಂಸದೆ ಶೋಭಾ ಕರಂದ್ಲಾಜೆ 

ಉಡುಪಿ: ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೇಂದ್ರ ಗೃಹಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಪ್ರಧಾನಿ ಹಾಗೂ ಗೃಹಸಚಿವರಿಗೆ ಮನವರಿಕೆ ಮಾಡಿದ್ದಾರೆ. 


ಕರಾವಳಿ ಭಾಗದ ಜನಪ್ರತಿನಿಧಿಗಳು ಬೆಂಬಲಿಸಿದ್ದೇವೆ. ಆದರೆ ತುಳು ಪ್ರತ್ಯೇಕ ರಾಜ್ಯದ ಕುಚೋದ್ಯದ ಬೇಡಿಕೆಗಳಿಗೆ ನಮ್ಮ ಬೆಂಬಲವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಏಕೀಕರಣದಿಂದ ನಾವೆಲ್ಲಾ ಒಟ್ಟಾಗಿದ್ದೇವೆ.
 
 ತುಳು ರಾಜ್ಯ ರಚನೆ ಪ್ರಸ್ತಾವ ಬೆಂಬಲಿಸಿದರೆ ಮಹಾರಾಷ್ಟ್ರ ಇದನ್ನು ದುರುಪಯೋಗ ಪಡಿಸಿ ಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ನೀಡಲಾಗುವುದಿಲ್ಲ. ತುಳು ಭಾಷೆಗೆ ಗೌರವ ಸಿಗಬೇಕು. ಇದಕ್ಕೆ ಹೋರಾಟ ಮಾಡಲಾಗುವುದು ಎಂದರು.

ಉದಯ ಗಾಣಿಗ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ನಿಲುವು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಅಪರಾಧದಲ್ಲಿ ಜಾತಿ, ಧರ್ಮ, ಪಕ್ಷವಿಲ್ಲ ಎಂದರು.  

 
 
 
 
 
 
 
 
 
 
 

Leave a Reply