ಇಂದಿನಿಂದ ದೇಶಾದ್ಯಂತ 392 ವಿಶೇಷ ರೈಲು ಸಂಚಾರ ಆರಂಭ

ಹೊಸದಿಲ್ಲಿ: ಭಾರತದಲ್ಲಿ ಕೊರೋನಾ ತೀವ್ರತೆಯ ನಡೆವೆಯೂ ನವರಾತ್ರಿ, ದೀಪಾವಳಿ ಹಬ್ಬಗಳ ನಡೆಯುತ್ತಿದೆ. ಈ ಹಿನ್ನಲೆ ಭಾರತೀಯ ರೈಲ್ವೆ ಇಲಾಖೆ ಜನರಿಗೊಂದು ಸಿಹಿ ಸುದ್ದಿ ಕೊಟ್ಟಿದೆ.

ದೇಶದಲ್ಲಿ 392 ವಿಶೇಷ ರೈಲುಗಳು ಇಂದಿನಿಂದ ನವೆಂಬರ್ 30ರವರೆಗೂ ಸಂಚಾರಸಲಿವೆ. ಕೊರೋನಾ ಹರಡು ವುದನ್ನು ತಡೆಯುವ ನಿಟ್ಟಿನಲ್ಲಿ ದೇಶದಲ್ಲಿ ವಿಶೇಷ ರೈಲುಗಳು ಸಂಚರಿಸಲಿದ್ದು, ಪ್ರಯಾಣಿಕರ ಜನದಟ್ಟನೆ ನಿಯಂತ್ರಿಸಲು ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ನಿಯೋಜನೆ ಮಾಡಿದೆ.

ಇನ್ನು ವಾರಣಾಸಿ, ಲಖನೌ, ಪಟ್ನಾ, ಕೊಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ರೈಲು ಸಂಚಾರ ಆರಂಭ ವಾಗಿದ್ದು ಸದ್ಯ 666 ಎಕ್ಸಪ್ರೆಸ್ ರೈಲುಗಳು ಸಂಚಾರ ನಡೆಸುತ್ತಿವೆ. ಮುಂದಿನ 40 ದಿನಗಳು ಮಾತ್ರ 392 ವಿಶೇಷ ರೈಲುಗಳು ಸಂಚರಿಸಲಿವೆ.

 
 
 
 
 
 
 
 
 
 
 

Leave a Reply