ರೈಲ್ವೆ ಯಾತ್ರಿಕರಿಗೆ ಸಂತೋಷ – ಎಸ್. ಎಸ್. ತೋನ್ಸೆ

ಮಂಗಳೂರಿನ ಕಂಕನಾಡಿಯ ರೈಲು ಮಾರ್ಗಗಳ ಕೂಡು ನಿಲ್ದಾಣ, ಕೇಂದ್ರ ನಿಲ್ದಾಣದಲ್ಲಿ ಹೆಚ್ಚು ಕಾಲ ನಿಲುಗಡೆಗೊಂಡು ನಂತರ ಸಂಚರಿಸುವುದರಿಂದ ಆಗುವ ವಿಳಂಬವನ್ನು ಹೋಗಲಾಡಿಸುವಂತೆ ಉಡುಪಿ ರೈಲ್ವೆ ಯಾತ್ರಿಕರ ಸಂಘ ಕೇಳುತ್ತಲೇ ಇತ್ತು. ಬ್ಯೆಂದೂರು, ಕುಂದಾಪುರ ರೈಲ್ವೆ ಯಾತ್ರಿಕರ ಸಂಘ ಕೂಡಾ ಒತ್ತಾಯ ಪಡಿಸಿದ ಕಾರಣ ರೈಲಿನ ವೇಗ ಹೆಚ್ಚಿಸಿ ವೇಳಾಪಟ್ಟಿ ಬದಲಾವಣೆ ಆಗಿದೆ. ಇದರಿಂದ ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡಿ ಮರುದಿನ ಬೆಂಗಳೂರಿನಲ್ಲಿನ ಕೆಲಸ ಪೂರೈಸಿ, ಅದೇ ದಿನ ರಾತ್ರಿ ರೈಲಿನಲ್ಲಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ ಬೇಗನೆ ಉಡುಪಿ ತಲುಪಬಹುದು ಹೊಸ ವೇಳಾಪಟ್ಟಿಯಂತೆ. ಇದರಿಂದಾಗಿ ಸರಕಾರಿ ನೌಕರರು ಸೇರಿದಂತೆ ಇತರರು ತಮ್ಮ ಕರ್ತವ್ಯ ಕೇಂದ್ರಕ್ಕೆ ಸಕಾಲದಲ್ಲಿ ತಲುಪಲು ಅನುಕೂಲವಾಗಿದೆ. ಬಹಳ ದಿನಗಳ ಈ ಕೇಳಿಕೆ ಈಡೇರಿದ ಬಗ್ಗೆ ರೈಲ್ವೆ ಯಾತ್ರಿಕರಿಗೆ ಸಂತೋಷವಾಗಿದೆ ಎನ್ನುತ್ತಾರೆ ಉಡುಪಿ ರೈಲ್ವೆ ಯಾತ್ರಿಕರ ಸಂಘದ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯ ಎಸ್. ಎಸ್. ತೋನ್ಸೆ.

 
 
 
 
 
 
 
 
 

Leave a Reply